
ತುಳು ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ತುಳು ಫಿಲ್ಮ ಫೆಸ್ಟಿವಲ್ 2018 ಜನವರಿ 5 ರಿಂದ 11 ರ ತನಕ ನಡೆಯಲಿದ್ದು, ಇದರ ಉದ್ಘಾಟನಾ ಸಮಾರಂಭ ಜನವರಿ 4 ರಂದು ಸಂಜೆ ಪುರಭವನದಲ್ಲಿ ನಡೆಯಲಿದೆ ಎಂದು ತುಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ಮಾಹಿತಿ ನೀಡಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಸಮಾರಂಭದ ಉದ್ಘಾಟನೆಯೊಂದಿಗೆ ತುಳು ಚಿತ್ರರಂಗದ ತಾರೆಗಳ ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತುಳು ಫಿಲ್ಮ ಫೆಸ್ಟಿವಲ್ 1 ವಾರದ ಕಾಲ ನಡೆಯಲಿದ್ದು, ಒಟ್ಟು 49 ಸಿನಿಮಾಗಳು ಪ್ರದರ್ಶನವಾಗಲಿದೆ. ಇದರಲ್ಲಿ 24 ಸಿನಿಮಾ ಸಿನಿಪೊಲಿಸ್ನಲ್ಲಿ ಪ್ರದರ್ಶನವಾಗಲಿದ್ದು, ಉಳಿದ 25 ಸಿನಿಮಾಗಳು ಹಳೇ ಸಿನಿಮಾಗಳಾಗಿದ್ದು, ಡಾನ್ ಬೋಸ್ಕೋ ಹಾಲ್ನಲ್ಲಿ ಪ್ರದರ್ಶನವಾಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳಾದ ಸಚಿವ್, ಕಿಶೋರ್ ಕೊಟ್ಟಾರಿ ಉಪಸ್ಥಿತರಿದ್ದರು.
ವರದಿ: ನಾಗರಾಜ್ ಮಂಗಳೂರು