Header Ads
Header Ads
Breaking News

”ತುಳು ರಂಗ್ 2018’ ಸಂಸ್ಕೃತಿದ ಒರಿಪು ಬುಳೆಚ್ಚಿಲ್‌ಗಾದ್ ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಪಂತ ಪ್ರದರ್ಶನ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದಿಂದ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ, ”ತುಳು ರಂಗ್ 2018’ ಸಂಸ್ಕೃತಿದ ಒರಿಪು ಬುಳೆಚ್ಚಿಲ್‌ಗಾದ್, ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಪಂತ ಪ್ರದರ್ಶನ ಕಾರ್‍ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾಭವನದಲ್ಲಿ ಹಮ್ಮಿಕೊಂಡಿತ್ತು. ಕಾರ್‍ಯಕ್ರಮದ ಸಮಾರೋಪ ಸಮಾರಂಭದಲ್ಲಿ ತುಳು ನಾಟಕ ಹಾಗೂ ಚಿತ್ರರಂಗದ ಖ್ಯಾತ ಕಲಾವಿದ ಅರವಿಂದ ಬೋಳಾರ್ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಲೆ ಮತ್ತು ಕಲಾವಿದನಿಗೆ ಮಹಾಮನೆಯಿದ್ದಂತೆ. ಕಲೆ ಸಂಸ್ಕೃತಿಯನ್ನು ಉನ್ನತ ಸ್ಥಾನದಲ್ಲಿ ಇಟ್ಟು ಪೋಷಿಸುವ ಮೋಹನ್ ಆಳ್ವರು ಅಪರೂಪದ ಕಲಾಪೋಷಕ ಎಂದರು.

ಗುರುಹಿರಿಯರ, ಪೋಷಕರ, ಭಗವಂತನ ಆರ್ಶೀವಾದದಿಂದ ತಾನಿಂದು ದೊಡ್ಡ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದೆನೆ. ತಾನು ವಿದ್ಯೆ ಇಲ್ಲದೆಯೂ ಇಂದು ಗೌರವವನ್ನು ಗಳಿಸಿರುವುದು ಕಲಾದೇವಿಯ ಆರ್ಶೀವಾದದಿಂದ ಎಂದರು. ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್‍ಯ ಪ್ರೋ ಕುರಿಯನ್ ಮಾತನಾಡಿ, ಒಬ್ಬ ಕಲಾವಿದನಿಗೆ ಮನುಷ್ಯನ ಭಾವನೆಯನ್ನು ಅರಳಿಸುವ, ಮನಸ್ಸನ್ನು ಆನಂದ ಪಡಿಸುವ ಸಾಮಾರ್ಥ್ಯವಿದೆ. ಕಲೆ ಈ ಸಮಾಜವನ್ನು ಒಂದುಗೂಡಿಸುವ ಹಾಗೂ ನಗುವಿನಿಂದ ಸಹಸ್ರ ಹೃದಯವನ್ನು ಗೆಲ್ಲುವ ಅಧಮ್ಯ ಶಕ್ತಿಯನ್ನು ಹೊಂದಿದೆ ಎಂದರು. ತುಳು ಭಾಷೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ತಂದುಕೊಡುವಲ್ಲಿ ಅರವಿಂದ ಬೋಳಾರ್‌ರ ಕೊಡುಗೆ ಅಪಾರ ಎಂದರು. ಇದೇ ಸಂಧರ್ಭದಲ್ಲಿ ಕಲಾವಿದ ಅರವಿಂದ ಬೋಳರ್‌ರವರನ್ನು ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದಿಂದ ಸನ್ಮಾನಿಸಲಾಯಿತು. ಪ್ರಶಂಸ ಕಾಪು ತಂಡದಿಂದ ಬಲೇ ತೆಲಿಪುಲೆ ಕಿರು ನಾಟಕ ಪ್ರದರ್ಶನ ನಡೆಯಿತು.
ಅಂತರ್ ಕಾಲೇಜು ತುಳು ಸಾಂಸ್ಕೃತಿಕ ಪಂತ ಪ್ರದರ್ಶನದಲ್ಲಿ ಅನೇಕ ಸ್ಪರ್ಧೆಗಳು ನಡೆದವು. ಕಡಲ್ ತಂಡ ಸಮಗ್ರ ಪ್ರಶಸ್ತಿಗೆ ಭಾಜನವಾಗಿ, ತಂಡ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದು ಕೊಂಡಿತು.
ವರದಿ: ಪ್ರೇಮಶ್ರೀ ಮೂಡಬಿದರೆ