Header Ads
Header Ads
Breaking News

ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾಗಿ ಎ.ಸಿ.ಭಂಡಾರಿ ನೇಮಕ ಕೊನೆಗೂ ಅಂತಿಮಗೊಂಡ ಬಹುನಿರೀಕ್ಷೆಯ ಅಕಾಡೆಮಿಯ ಆಯ್ಕೆ

 

ಮಂಗಳೂರು: ತುಳು ಸಂಘಟಕ ಎ.ಸಿ. ಭಂಡಾರಿ ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಬಹುನಿರೀಕ್ಷೆಯ ಅಕಾಡೆಮಿಯ ಆಯ್ಕೆ ಕೊನೆಗೂ ಅಂತಿಮಗೊಂಡಿದೆ. ಈ ಬಾರಿಯ ನೇಮಕದ ವಿಶೇಷ ಎಂದರೆ ಎಂದಿಗಿಂತ ಇಬ್ಬರು ಹೆಚ್ಚು ಸದಸ್ಯರಿರುವುದು.
ಹತ್ತರ ಬದಲು ಹನ್ನೆರಡು ಸದಸ್ಯರನ್ನು ನೇಮಿಸಲಾಗಿದೆ. ಸುಧಾ ನಾಗೇಶ್, ತಾರಾನಾಥ ಗಟ್ಟಿ ಕಾಪಿಕಾಡು, ಎ.ಗೋಪಾಲ್ ಅಂಚನ್, ವಿದ್ಯಾಶ್ರೀ ಎಸ್, ದುರ್ಗಾ ಮೆನನ್, ಶಿವಾನಂದ ಕರ್ಕೆರ, ಬೆನೆಟ್ ಅಮ್ಮಣ್ಣ, ಚಂದ್ರಶೇಖರ್ ಗಟ್ಟಿ ಬೋಳೂರು, ಡಾ.ವಾಸುದೇವ್ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು, ಡಾ.ವೈ.ಎನ್.ಶೆಟ್ಟಿ ನೇಮಕಗೊಂಡಿದ್ದಾರೆ. ವೈ.ಎನ್.ಶೆಟ್ಟಿ ಉಡುಪಿ ಜಿಲ್ಲೆಯವರಾಗಿದ್ದು, ಉಳಿದವರೆಲ್ಲರೂ ದ.ಕ. ಜಿಲ್ಲೆಯವರಾಗಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರ ಸಂಖ್ಯೆಯನ್ನು ೧೦ರಿಂದ ೧೫ಕ್ಕೆ ತುಳು ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿಗಳ ಸದಸ್ಯರ ಸಂಖ್ಯೆಯನ್ನು ೧೦ರಿಂದ ೧೨ಕ್ಕೆ ಹೆಚ್ಚಿಸಲಾಗಿದೆ.
ಇನ್ನು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಡಾ. ಅರವಿಂದ ಮಾಲಗತ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಡಾ.ಕೆ. ಮರುಳ ಸಿದ್ದಪ್ಪ, ಕನ್ನಡ ಪುಸ್ತಕ ಪ್ರಾಧಿಕಾರ ಡಾ. ವಸುಂಧರಾ ಭೂಪತಿ, ಕರ್ನಾಟಕ ನಾಟಕ ಅಕಾಡೆಮಿ ಜೆ. ಲೊಕೇಶ್, ಸಂಗೀತ-ನೃತ್ಯ ಅಕಾಡೆಮಿ ಫಯಾಜ್ ಖಾನ್, ಜಾನಪದ ಅಕಾಡೆಮಿ ಬಿ. ಟಾಕಪ್ಪ, ಶಿಲ್ಪಕಲಾ ಅಕಾಡೆಮಿ ಕಾಳಾಚಾರ್ ಆಯ್ಕೆಗೊಂಡಿದ್ದಾರೆ.

Related posts

Leave a Reply