Header Ads
Header Ads
Breaking News

ತುಳು ಸಿನಿಮಾಗಳಲ್ಲಿ ಅಶ್ಲೀಲ ಸಂಭಾಷಣೆ

ಇತ್ತೀಚೆಗೆ ಕರಾವಳಿಯಲ್ಲಿ ಬಹಳ ಪ್ರಚಾರ ಪಡೆದು, ನಾಡಿನಾದ್ಯಂತ ಪ್ರದರ್ಶನಗೊಳ್ಳುತ್ತಿರುವ ತುಳು ಸಿನಿಮಾ ಅಪ್ಪೆ ಟೀಚರ್ ಮಹಿಳೆಯರು ಹಾಗೂ ಪುರುಷರು ಕೂಡಾ ಮುಜುಗರ ಪಡುವಂತಹ ಸಂಭಾಷಣೆಗಳಿಂದ ಕೂಡಿದೆ ಎಂದು ಆರೋಪಿಸಿ ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿದರು.ಇತ್ತಿಚೆಗೆ ಬಿಡುಗಡೆಗೊಂಡ “ಅಪ್ಪೆ ಟೀಚರ್” ತುಳು ಸಿನಿಮದಿಂದ ಸ್ತ್ರೀ ಸಮುದಾಯ ಮುಜುಗರದ ಪರಿಸ್ಥಿತಿಗೆ ಒಳಗಾಗಿದೆ. ಅತ್ಯಾಚರಕ್ಕೆ ಪ್ರೋತ್ಸಾಹ ನೀಡುವಂತಿದೆ.ಇಂತಹಾ ಸಿನಿಮಗಳು ರಾಜ್ಯಾದ್ಯಂತ ರದ್ದಾಗಬೇಕು. ಮತ್ತು ಇಂತವರ ವಿರುದ್ಧ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು, ಹೆಣ್ಣು ಸಮಾಜ ಕಣ್ಣು ಅವಳು ತಾಯಿ ಅವಳಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ದೊರಕುವಂತಾಗಬೇಕು. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ.ಇಂತಹಾ ವಿಚಾರಗಳು ಮುಂದುವರೆದರೆ ದೇಶದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

   

ಈ ಪ್ರತಿಭಟನೆಗೆ ಜಮಾಅತೆ ಇಸ್ಲಾಮಿ ಹಿಂದ್, ಕರಾವಳಿ ಲೇಖಕಿ ವಾಚಕಿಯರ ಸಂಘ, ಕಾಸರಗೋಡು ಮತ್ತು ದಕ್ಷಿಣ ಕನ್ನಡ,ಪ್ರಜ್ಷಾ ಸಲಹಾ ಕೇಂದ್ರ ಕಂಕನಾಡಿ, ಅಖಿಲ ಭಾರತ ಬಿಲ್ಲವರ ಸಂಘ ಕುದ್ರೋಳಿ,ದಕ್ಷಿಣ ಕನ್ನಡ ಕಾಂಗ್ರೆಸ್ ಮಹಿಳಾ ಮೋರ್ಚಾ,ದಕ್ಷಿಣ ಕನ್ನಡ ಬಿಜೆಪಿ ಮಹಿಳಾ ಮೋರ್ಚಾ ಮತ್ತಿತರ ಮಹಿಳಾ ಸಂಘಟನೆಗಳು ಕೈಜೋಡಿಸಿದರು.

Related posts

Leave a Reply