Header Ads
Header Ads
Breaking News

ತೂಮಿನಾಡಿನಲ್ಲಿ ರಕ್ತದಾನ ಶಿಬಿರ : ದೇರಳಕಟ್ಟೆ ಯೆನೆಪೋಯ ರಕ್ತನಿಧಿ ಘಟಕದ ಸಹಯೋಗ

ಮಂಜೇಶ್ವರ: ತೂಮಿನಾಡು ಅರಬ್ ರೈಡರ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೆನಪೋಯ ರಕ್ತನಿಧಿ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು.

ತೂಮಿನಾಡು ಅಲ ಫತಾಹ್ ಜುಮಾ ಮಸೀದಿ ಅಂಗಣದಲ್ಲಿ ಕ್ಲಬ್ ಅಧ್ಯಕ್ಷ ಯಾಯ್ಯಾ ತೂಮಿನಾಡು ಇವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಮಸೀದಿ ಖತೀಬರಾದ ಅಬ್ದುಲ್ ರಹ್ಮಾನ್ ಹರ್ಷಿದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಅತ್ಯಂತ ಶ್ರೇಷ್ಠ ದಾನಗಳಲ್ಲೊಂದಾಗಿದೆ ರಕ್ತದಾನ. ಎಲ್ಲಾ ಧರ್ಮಗಳಲ್ಲೂ ರಕ್ತದಾನಕ್ಕೆ ಪ್ರತ್ಯೇಕವಾದ ಮಹತ್ವವನ್ನು ನೀಡಿದೆ ಎಂದರು. ಬ್ಲಡ್ ಡೋನರ್ಸ್ ತಂಡದ ಸಿದ್ದೀಖ್ ಮಂಜೇಶ್ವರ, ನವಾಜ್ ಕಲ್ಲರಕೋಡಿ, ಫಾರೂಕ್, ಅರಬ್ ರೈಡರ್ಸ್‌ನ ಸಿದ್ದೀಖ್ ತಂಘಳ್, ರಜಾಕ್ ಎಂ ಬಿ, ಇಲ್ಯಾಸ್, ಸತ್ತಾರ್, ಅಶ್ರಫ್ ಕೊಯಿನ್ನೂರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *