Header Ads
Header Ads
Breaking News

ತೂಮಿನಾಡಿನಲ್ಲಿ ವಿಜೃಂಭಣೆಯಿಂದ ಜರುಗಿದ ಸಾರ್ವಜನಿಕ ಮೊಸರು ಕುಡಿಕೆ

ತೂಮಿನಾಡು ಮೊಸರು ಕುಡಿಕೆ ಸಮಿತಿಯ ವತಿಯಿಂದ ದ್ವಿತೀಯ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಭಾರೀ ವಿಜೃಂಭನೆಯಿಂದ ಜರಗಿತು. ತೂಮಿನಾಡು ಕಟ್ಟೆ ಜಂಕ್ಷನಿನಲ್ಲಿ ಮೊಸರು ಕುಡಿಕೆ ಸಮಿತಿ ಅಧ್ಯಕ್ಷ ವಿಘ್ನೇಷ್‌ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಧಾರ್ಮಿಕ ಮುಂದಾಳು ಕ್ರಷ್ಣಾ ಶಿವಕ್ರಪಾ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಮೋಹನ್ ಶೆಟ್ಟಿ, ಹರೀಶ್ ಮಾಡ, ಚಂದಪ್ಪ, ಲೋಕೇಶ್, ಕ್ರಷ್ಣಪ್ಪ ಪೂಜಾರಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬಳಿಕ ನಡೆದ ಶೋಭಾಯಾತ್ರೆ ತೂಮಿನಾಡು ಮಹಾಕಾಳಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಮೊಸರು ಕುಡಿಕೆ ವೀಕ್ಷಿಸಲು ನಾನಾ ಕಡೆಗಳಿಂದ ನೂರಾರು ಭಕ್ತಾಭಿಮಾನಿಗಳು ಆಗಮಿಸಿದ್ದರು.

Related posts

Leave a Reply

Your email address will not be published. Required fields are marked *