Header Ads
Breaking News

ತೂಮಿನಾಡಿನಲ್ಲಿ ಸ್ವದೇಸ್ ದರ್ಸ್‌ಗೆ ಚಾಲನೆ : ಅಲ್ ಫತಾ ಜುಮಾ ಮಸೀದಿ ಕಮಿಟಿಯಿಂದ ಚಾಲನೆ

ಅಲ ಫತಾ ಜುಮಾ ಮಸೀದಿ ತೂಮಿನಾಡಿನ ಚರಿತ್ರೆಯಲ್ಲಿ ಹೊಸತಾದ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ. ಸ್ಥಳೀಯ ಹಿರಿಯ ವಿದ್ಯಾರ್ಥಿಗಳಿಗೆ ಉತ್ತಮವಾದ ಇಸ್ಲಾಂ ವಿದ್ಯಾಭ್ಯಾಸವನ್ನು ನೀಡುವ ಉದ್ದೇಶದಿಂದ ತೂಮಿನಾಡು ಅಲ ಫತಾ ಜುಮಾ ಮಸೀದಿ ಕಮಿಟಿ “ಸ್ವದೇಸ್ ದರ್ಸ್ ” ಎಂಬ ಮಹಲ್ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ. ಸದ್ರಿ ಮಸೀದಿಯಲ್ಲಿ ಮಸೀದಿ ಕಮಿಟಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಯಾವರ ಸಾವಿರ ಜಮಾಹತ್ ಮುದರಿಸ್ ಅಬ್ದುಲ್ ಖಾದರ್ ಮದನಿ ವಿದ್ಯಾರ್ಥಿಗಳಿಗೆ ಹತ್ತನೇ ಕಿತಾಬನ್ನು ಕಿರು ಪರಿಚಯಿಸುವ ಮೂಲಕ ಉದ್ಘಾಟಿಸಿದರು. ಅದೇ ರೀತಿ ಸ್ಥಳೀಯ ನಿವಾಸಿಗಳಾದ ಅಬ್ದುಲ್ ಲತೀಫ್ ಬಾಬಾ, ಸತ್ತಾರ್, ಇಸ್ಮಾಯಿಲ್ ಎಂ ಪಿ, ಬಶೀರ್ ಎಂಬಿವರು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲು ಕೊಟ್ಟಿರುವ ಪಠ್ಯ ಪುಸ್ತಕಗಳ ವಿತರಣೆಯ ಉದ್ಘಾಟನೆಯನ್ನು ಕೂಡಾ ಅಬ್ದುಲ್ ಖಾದರ್ ಮದನಿ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ನಿರ್ವಹಿಸಿದರು. ಮಸೀದಿ ಖತೀಬ್ ಅಬ್ದುಲ್ ರಹ್ಮಾನ್ ಹರ್ಷದಿ ಪ್ರಾಸ್ತಾವಿಕ ಭಾಷಣ ಗೈದರು. ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಟಿಎಂ ಮಹಮೂದ್, ಮನ್ಸೂರ್, ಕುಂಜಿ ಮೋನು, ಅಧ್ಯಾಪಕರುಗಳಾದ ಅಬ್ದುಲ್ ರವೂಫ್ ಫೈಜಿ , ಅಬೂಬಕ್ಕರ್ ಮುಸ್ಲಿಯಾರ್, ಶಫಿಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *