Header Ads
Header Ads
Breaking News

ತೂಮಿನಾಡಿನ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ : ಬೆಕ್ಕು, ನಾಯಿ, ಆಡುಗಳ ಮಾರಣ ಹೋಮ

ಮಂಜೇಶ್ವರ ಗ್ರಾಮ ಪಂಚಾಯತ್ ಎರಡನೇ ವಾರ್ಡಿನ ಉದಯ ನಗರ, ಹಿಲ್ ಟಾಪ್ ನಗರದ ಕಾಡು ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಚಿರತೆ ಪ್ರತ್ಯಕ್ಷಗೊಂಡಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಾತ್ರವಲ್ಲದೆ ಕಳೆದ ಕೆಲವು ದಿನಗಳಿಂದ ಈ ಪರಿಸರದ ಮನೆಗಳಲಿದ್ದ ನಾಯಿ, ಆಡು, ಬೆಕ್ಕುಗಳ ಕಳೇಬರಹ ಪತ್ತೆಯಾಗಿವೆ.

ಮೊದಲು ಕಾಡು ಹಂದಿ ಅಥವಾ ಕಾಡು ಬೆಕ್ಕುಗಳು ಆಕ್ರಮಣ ನಡೆಸಿರಬಹುದಾಗಿ ಶಂಕಿಸಲಾಗುತ್ತಿತ್ತು, ಆದರೆ ಇದೀಗ ಕೆಲವೊಂದು ಮಂದಿ ಚಿರತೆಯನ್ನು ಕಣ್ಣಾರೆ ಕಂಡಿರುವುದಾಗಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಸಂಜೆಯಾಗುತ್ತಿದ್ದಂತೆ ಮನೆಮಂದಿ ಹೊರಗಿಳಿಯಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲಸಕ್ಕೆ ಹೋಗುವ ವಯಸ್ಕರೂ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಬೆಳಗ್ಗೆ ಮದ್ರಾಸಕ್ಕೆ ಹೋಗುವ ಮಕ್ಕಳು ಇದೇ ಹಾದಿಯನ್ನು ಹಿಡಿದು ಬೆಳಗ್ಗೆ ಸಂಜೆ ದಾರಿಯಲ್ಲಿ ಒಬ್ಬೊಬ್ಬರೇ ನಡೆದುಕೊಂಡು ಹೋಗುತ್ತಿರುತ್ತಾರೆ.
ಚಿರತೆ ಇದೆಯೇ ಎಂಬುದನ್ನು ಖಾತರಿಪಡಿಸಲು ಅರಣ್ಯ ಇಲಾಖೆಯವರು ಬರಬೇಕಾಗಿದೆ. ಈ ತನಕ ಲಿಖಿತವಾಗಿ ಯಾರೂ ದೂರು ನೀಡದೇ ಇರುವ ಹಿನ್ನೆಲೆಯಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ಕೂಡಾ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ದುರಂತ ಸಂಭವಿಸುವುದಕ್ಕಿಂತ ಮೊದಲು ಎಚ್ಚೆತ್ತುಕೊಂಡರೆ ಅನಾಹುತವನ್ನು ತಪ್ಪಿಸಬಹುದು. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕೆಂಬುವುದು ನಮ್ಮ ಆಶಯ

Related posts

Leave a Reply