Header Ads
Breaking News

ತೂಮಿನಾಡಿನ ಹುಲ್ಲುಗಾವಲು ಪ್ರದೇಶ ಬೆಂಕಿಗಾಹುತಿ:ಸ್ಥಳೀಯ ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ

ಮಂಜೇಶ್ವರ: ತೂಮಿನಾಡಿನ ಹುಲ್ಲುಗಾವಲು ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡು ಭಾರೀ ಆತಂಕದ ವಾತಾವರಣ ಸೃಷ್ಠಿಯಾಗಿತ್ತು. ಬೆಂಕಿ ಸಮೀಪವಿರುವ ಮನೆ ಪರಿಸರಕ್ಕೆ ಪಸರಿಸುವುದನ್ನು ಕಂಡ ಸ್ಥಳೀಯ ಯುವಕರು ಸಾಧ್ಯವಾದಷ್ಟು ಮಟ್ಟಿಗೆ ನೀರನ್ನು ಹಾಕಿ ನಂದಿಸಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಭಾರೀ ದುರಂತವೊಂದು ತಪ್ಪಿ ಹೋಗಿದೆ.ತೂಮಿನಾಡು ಹಳೆಯ ಆರ್‌ಟಿಓ ಪ್ರದೇಶಕ್ಕೆ ಹತ್ತಿರುವ ಹುಲುಗಾವಲು ಸ್ಥಳಕ್ಕೆ ಬೆಂಕಿ ಹತ್ತಿಕೊಂಡು ಗಾಳಿಯಿಂದ ಧಗಧಗನೆ ಉರಿಯ ತೊಡಗಿದೆ. ಖಾಲಿ ಪ್ರದೇಶದಲ್ಲಿದ್ದ ಹುಲ್ಲುಗಳು ಸಂಪೂರ್ಣವಾಗಿ ಉರಿದು ಸಮೀಪದ ತೆಂಗಿನ ಮರ ಕೂಡಾ ಉರಿದಿದೆ.ಇದರ ಸಮೀಪವೇ ಫ್ಲಾಟ್ ಹಾಗೂ ಹಲವಾರು ಮನೆಗಳು ಇತ್ತು. ಯುವಕರು ಮೊದಲೇ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಹತ್ತಿ ಕೊಂಡ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

Related posts

Leave a Reply

Your email address will not be published. Required fields are marked *