
ಮಂಜೇಶ್ವರ: ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶೇಖ್ ಅಬ್ದುಲ್ ಖಾದಿರ್ ಜೀಲಾನಿ ಅನುಸ್ಮರಣೆ ಹಾಗೂ ರಾತೀಬ್ ಮಜಿಲಿಸ್ ನಡೆಯಿತು.ಉದ್ಯಾವರ ಜಮಾಹತ್ ಅಧೀನತೆಯಲ್ಲಿರುವ ತೂಮಿನಾಡು ಅಲ್ ಫತಾ ಜುಮಾ ಮಸೀದಿ, ಮದ್ರಸ ಕಮಿಟಿ ಹಾಗೂ ಬುಸ್ತಾನುಲ್ ಇಖ್ವಾನ್ ಸಂಘಟನೆಯ ಸಹಕಾರದೊಂದಿಗೆ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ನಡೆದ ರಾತೀಬ್ ಮಜಿಲಿಸ್ ಹಾಗೂ ಅನುಸ್ಮರಣಾ ಕಾರ್ಯಕ್ರಮಕ್ಕೆ ನೂರಾರು ಮಂದಿ ವಿಶ್ವಾಸಿಗಳು ಸಾಕ್ಷಿಯಾದರು.ಮಸೀದಿಯಲ್ಲಿ ನಡೆದ ರಾತೀಬ್ ಮೌಲಿದ್ ಗೆ ಅಬ್ದುಲ್ ರವೂಫ್ ಫೈಜಿ ನೇತೃತ್ವ ನೀಡಿದರು. ಮಸೀದಿ ಖತೀಬರಾದ ಅಬ್ದುಲ್ ರಹ್ಮಾನ್ ಹರ್ಷದಿ ಅನುಸ್ಮರಣ ಪ್ರಭಾಷಣ ನಡೆಸಿದರು. ಇಬ್ರಾಹಿಂ ಖಲೀಲ್ ಹನೀಫಿ, ಅಬೂಬಕ್ಕರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.