Header Ads
Header Ads
Breaking News

ತೂಮಿನಾಡು ಉತ್ಸವ ಸಮಿತಿಯಿಂದ ಮೊಸರು ಕುಡಿಕೆ. ವಿಜೃಂಭಣೆಯಿಂದ ನಡೆದ ಕಾರ್ಯಕ್ರಮ.

ಮಂಜೇಶ್ವರ: ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ತೂಮಿನಾಡಿನಲ್ಲಿ ತೂಮಿನಾಡು ಉತ್ಸವ ಸಮಿತಿಯ ವತಿಯಿಂದ ಈ ಸಲ ವಿಜೃಂಭಣೆಯ ಮೊಸರು ಕುಡಿಕೆ ನಡೆಯಿತು.ಶ್ರೀ ಕೃಷ್ಣಾಷ್ಟಮಿ ಯ ಅಂಗವಾಗಿ ಪ್ರತೀ ವರ್ಷವೂ ಶ್ರೀ ಮಹಾಕಾಳಿ ಭಜನಾ ಮಂದಿರದಲ್ಲಿ ಮೊಸರು ಕುಡಿಕೆ ನಡೆಯುತಿದ್ದರೂ ಈ ಸಲ ವಿಶೇಷವಾಗಿ ತೂಮಿನಾಡು ಜಂಕ್ಷನಿನಲ್ಲಿ ಮಡಕೆ ಒಡೆಯುವ ಸರಳ ಸಮಾರಂಭವನ್ನು ಸಮಿತಿಯ ಗೌರವಾಧ್ಯಕ್ಷ ಧಾರ್ಮಿಕ ಮುಂದಾಳು ಶ್ರೀ ಕೃಷ್ಣಾ ಶಿವ ಕೃಪಾ ಕುಂಜಾತ್ತೂರು ಉದ್ಘಾಟಿಸಿದರು.

ಬಳಿಕ ಮಹಾಕಾಳಿ ತಾಯಿಯ ತನಕ ಶ್ರೀ ಕೃಷ್ಣ ದೇವರ ಮೊಸರು ಕುಡಿಕೆಯ ಶೋಭಾ ಯಾತ್ರೆಯು ವಾದ್ಯ ಘೋಷಗಳಿಂದ ತೆರಳಿತು ಈ ಸಂದರ್ಭ ಸ್ಥಳೀಯ ಯುವಕರು ಪಿರಮಿಡ್ ಗಳನ್ನು ನಿರ್ಮಿಸಿ ಕುಡಿಕೆ ಒಡೆವ ಆಟ ಸೇರಿದ ಭಕ್ತಾಭಿಮಾನಿಗಳನ್ನು ಮನರಂಜಿಸಿತು.ವಿಶ್ನೇಷ ತೂಮಿನಾಡು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವನಾಥ್ ಮಡಿವಾಲ್, ಮೋಹನ್ ಶೆಟ್ಟಿ, ರಾಧಾ ಕೃಷ್ಣ ಆಚಾರಿ, ಈಶ್ವರ ಮಾಸ್ಟರ್, ಆನಂದ ಮಾಸ್ಟರ್, ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ಜಯಂತ, ಹರೀಶ್ ಶೆಟ್ಟಿ ಮಾಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related posts

Leave a Reply