Header Ads
Header Ads
Breaking News

ತೂಮಿನಾಡು ಕಬಡ್ಡಿ ಪಂದ್ಯಾಟ : ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಮಂಜೇಶ್ವರ: ತೂಮಿನಾಡು ಅರಬ್ ರೈಡರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಹೊನಲು ಬೆಳಕಿನ ಓಪನ್ ಮ್ಯಾಟ್ ಕಬಡ್ಡಿ ಸೀಸನ್ 4ಪಂದ್ಯಾಟ ನಡೆಯಿತು. ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನದ 30,303 ಸಾವಿರ ರೂ. ನಗದು ಹಾಗೂ ಚಾಂಪಿಯನ್ ಬೆಳ್ಳಿ ಟ್ರೋಫಿಯನ್ನು ಕುಂಜತ್ತೂರಿನ ಶಿವಶಕ್ತಿ ತಂಡ ತನ್ನ ಮುಡಿಗೇರಿಸಿಕೊಂಡಿತು.ಪಂದ್ಯಾಟದ ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯಿತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿದರು. ಅರಬ್ ರೈಡರ್ಸ್ ಕ್ಲಬ್ ಅಧ್ಯಕ್ಷ ಯಾಯ್ಯಾ ಗೋಲ್ಡ್ ಖಜಾನ ಅಧ್ಯಕ್ಷ ತೆ ವಹಿಸಿದ್ದರು. ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಆಟಕ್ಕೆ ಆರಂಭದಲ್ಲಿ ಕಬಡ್ಡಿ ಪಂದ್ಯಾಟದ ಮೈದಾನವನ್ನು ಸಮುದ್ರ ತಾರೆ ರೊನಾಲ್ಡ್ ಪಿಂಟೋ ಉದ್ಘಾಟಿಸಿದರು.ಕರ್ನಾಟಕ ಹಾಗೂ ಕೇರಳದಿಂದ ಆಗಮಿಸಿದ ಸುಮಾರು 24 ತಂಡಗಳು ಭಾಗವಹಿಸಿದ ಪಂದ್ಯಾಟದಲ್ಲಿ ಎಫ್ ಸಿ ಎಂ ತಂಡ ಮುಟ್ಟಂ ದ್ವಿತೀಯ 15,151ಸಾವಿರ ರೂ. ನಗದು ಹಾಗೂ ಬೆಳ್ಳಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ತೃತೀಯ ಸ್ಥಾನವನ್ನು ಕಂದಲ್ ತಂಡ ತನ್ನದಾಗಿಸಿಕೊಂಡರೆ ನಾಲ್ಕನೇ ಸ್ಥಾನವನ್ನು ಅರಬ್ ರೈಡರ್ಸ್ ತನ್ನದಾಗಿಸಿತು.

ಪಂದ್ಯಾಟದಲ್ಲಿ ಉತ್ತಮ ಹಿಡಿತಗಾರನಾಗಿ ಆಯ್ಕೆಯಾದ ಅಭಿ ಎಫ್ ಸಿ ಎಂ ಮುಟ್ಟಂ, ಉತ್ತಮ ದಾಳಿಗಾರನಾಗಿ ಆಯ್ಕೆಯಾದ ಅಖಿಲ್ ಕೊಲ್ಲಂ ಶಿವಶಕ್ತಿ ಕುಂಜತ್ತೂರು, ಪಂದ್ಯಾಟದ ಆಲ್ ರೌಂಡರ್‌ಗೆ ಆಯ್ಕೆಯಾದ ಸುನಿಲ್ ಕುಮಾರ್, ಪಂದ್ಯಾಟದ ಹೀರೋ ಆಗಿ ಆಯ್ಕೆಯಾದ ವಿಶ್ವರಾಜ್, ಹಾಗೂ ಶಿಶ್ತಿನ ತಂಡಕ್ಕೆ ಅಯ್ಕೆಯಾದ ಮಜಲ್ ಕುಂಜತ್ತೂರು ತಂಡಗಳಿಗೆ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು. ರಾತ್ರಿಯಿಂದ ಬೆಳಗ್ಗಿನ ತನಕ ನಡೆದ ಕಬಡ್ದಿ ಪಂದ್ಯಾಟವನ್ನು ವೀಕ್ಷಿಸಲು ನಾನಾ ದಿಕ್ಕುಗಳಿಂದ ಸಹಸ್ರಾರು ಕ್ರೀಡಾಪ್ರೇಮಿಗಳು ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮುಸ್ತಫ ಉದ್ಯಾವರ, ಹಿರಿಯ ಕಬ್ಬಡ್ಡಿ ಆಟಗಾರರಾದ ರಘು ಶೆಟ್ಟಿ, ವಿಶ್ವನಾಥ್ ಕುಂಜತ್ತೂರು, ನಾಲ್ಕನೇ ವಾರ್ಡು ಪಂ. ಸದಸ್ಯೆ ಶೋಭಾ ಶೆಟ್ಟಿ, ಕೃಷ್ಣಾ ಶಿವಕೃಪಾ, ನೌಶಾದ್ ಕುಂಜತ್ತೂರು, ಮುನೀರ್ ಕುಂಜತ್ತೂರು, ಮುನೀರ್ ಗೋಲ್ಡ್ ಖಜಾನ, ಅಬ್ದುಲ್ ಖಾದರ್ ಕೆ ಎಂ, ಶ್ರೀಧರ, ಹಮೀದ್ ಹೊಸಂಗಡಿ, ಹರೀಶ್ ತೂಮಿನಾಡು, ಸುಖೇಶ್ ಭಂಡಾರಿ, ಅನ್ವರ್ ಕೆ ಪಿ, ಜಬ್ಬಾರ್ ಪದವು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *