Header Ads
Header Ads
Breaking News

ತೂಮಿನಾಡು: ಕೆಲ ದಿನಗಳಿಂದ ಗಾಬರಿ ಹುಟ್ಟಿಸಿದ ನಾಗರಹಾವು

ಮಂಜೇಶ್ವರ: ತೂಮಿನಾಡಿನ ಮನೆಯೊಂದರ ಆವರಣದಲ್ಲಿ ಭಾರೀ ಗಾತ್ರದ ಹಾವೊಂದು ಮನೆಯವರನ್ನು ಹಾಗೂ ಸ್ಥಳೀಯರಲ್ಲಿ ತಾಸುಗಳ ತನಕ ಗಾಬರಿ ಹುಟ್ಟಿಸುವಂತೆ ಮಾಡಿದ ಘಟನೆ ನಡೆದಿದೆ.

ಈ ಮನೆ ಪರಿಸರದಲ್ಲಿ ಹಾಗೂ ಇತರೆಡೆಗಳಲ್ಲಿ ಕೆಲ ದಿನಗಳಿಂದ ಕಂಡು ಬರುತಿದ್ದ ಈ ನಾಗರ ಹಾವು ಕ್ಷಣಾರ್ಧದಲ್ಲಿ ಮಾಯವಾಗುತಿತ್ತು. ಆದರೆ ಅಧಿಕವಾಗಿಯೂ ಮನೆ ಪರಿಸರವನ್ನೇ ಮನೆಯನ್ನಾಗಿಸಿದ ನಾಗರ ಹಾವನ್ನು ಕಂಡ ಮನೆಯವರು ಭಯಭೀತರಾಗಿ ಬೊಬ್ಬೆ ಹಾಕಿದಾಗ ಅದು ಅಲ್ಲೇ ಇದ್ದ ಬಲೆಯೊಳಗೆ ಸಿಕ್ಕಿ ಕೊಂಡಿದೆ. ಹೆಬ್ಬಾವಿನ ಗಾತ್ರವಿರುವ ಈ ನಾಗರ ಹಾವು ಬಲೆಯಿಂದ ಹೊರಬರಲಾರದೆ ಚಡಪಡಿಸತೊಡಗಿದಾಗ ಸ್ಥಳಿಯರು ಹಾವು ಹಿಡಿಯುವನನ್ನು ಕರೆಸಿ ನಾಗರ ಹಾವನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.

Related posts

Leave a Reply