Header Ads
Header Ads
Breaking News

ತೂಮಿನಾಡು ಪದವಿನಲ್ಲಿ ಮಳೆ ಅವಾಂತರ ಅಂಗಡಿಯೊಳಗೆ ನುಗ್ಗಿದ ಮಳೆ ನೀರು ಹೊಸದಾಗಿ ನಿರ್ಮಿಸಿದ ರಸ್ತೆ ಬದಿ ಚರಂಡಿ ವ್ಯವಸ್ಥೆಯಿಲ್ಲ

 

ಕಾಸರಗೋಡು ಅಭಿವೃದ್ದಿ ಯೋಜನೆಯ 2016-2017ರ ಭಾಗವಾಗಿ ಆಡಳಿತಾನುಮತಿ ಲಭಿಸಿದ ಹಾಗೂ ಹಾರ್ಬರ್ ಇಂಜಿಯರಿಂಗ್ ಇಲಾಖೆ ಮುಖಾಂತರ ನಡೆಸಲ್ಪಡುವ ಮಂಜೇಶ್ವರ ಗ್ರಾ. ಪಂ. ನ 02 ನೇ ವಾರ್ಡ್ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ನಿರ್ಮಾಣ ಬಹುತೇಕ ಪೂರ್ನಗೊಂಡಿದೆ.
ಆದರೆ ರಸ್ತೆ ಕಾಂಕ್ರೀಟೀಕರಣ 09 ಇಂಚಿ ಎತ್ತರವಾಗಿರುವ ಹಿನ್ನೆಲೆಯಲ್ಲಿ ತೂಮಿನಾಡು ಜಂಕ್ಷನಿನಲ್ಲಿ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ಕಳೆದ ರಾತ್ರಿ ಸುರಿದ ಮಳೆ ನೀರು ಅಂಗಡಿಯೊಳಗೆ ನುಗ್ಗಿದೆ. ಹಾಗಿದ್ದರೆ ಸಣ್ಣ ಪ್ರಮಾಣದ ಮಳೆಯಲ್ಲಿ ಈ ರೀತಿ ನೀರು ಕಟ್ಟಿ ನಿಂತರೆ ಮಳೆಗಾಲದಲ್ಲಿ ಇಲ್ಲಿಯ ಅವಸ್ಥೆ ಏನಾಗಿರಬಹುದೆಂಬುದು ವ್ಯಾಪಾರಿಗಳ ಪ್ರಶ್ನೆ