Header Ads
Header Ads
Header Ads
Breaking News

ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಗುತ್ತಿಗೆದಾರನ ಕಳಪೆ ಕಾಮಗಾರಿ ಗ್ರಾಮಸ್ಥರು, ರಾಜಕೀಯ ಪಕ್ಷಗಳು ರಂಗಕ್ಕೆ ಸಿ‌ಎಂ, ವಿಜಿಲೆನ್ಸ್ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ದೂರು

ಮಂಜೇಶ್ವರ: ಕಾಸರಗೋಡು ಅಭಿವೃದ್ದಿ ಯೋಜನೆಯ 2016 ? 2017 ರ ಭಾಗವಾಗಿ ಆಡಳಿತಾನುಮತಿ ಲಭಿಸಿದ ಹಾಗೂ ಹಾರ್ಬರ್ ಇಂಜಿಯರಿಂಗ್ ಇಲಾಖೆ ಮುಖಾಂತರ ನಡೆಸಲ್ಪಡುವ 57,99,000 ರೂ. ವೆಚ್ಚದಲ್ಲಿ ಮಂಜೇಶ್ವರ ಗ್ರಾ. ಪಂ. ನ 2 ನೇ ವಾರ್ಡ್ ತೂಮಿನಾಡು ? ಪದವು (685) ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣದಲ್ಲಿ ಗುತ್ತಿಗೆದಾರ ಕಳಪೆ ಕಾಮಗಾರಿ ನಡೆಸಿ ಗ್ರಾಮಸ್ಥರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದಾಗಿ ಗ್ರಾಮಸ್ಥರು ಹಾಗೂ ಬಿಜೆಪಿ ಮಂಜೇಶ್ವರ ಮಂಡಲ ಆರೋಪಿಸಿದೆ.

ಜೊತೆಯಾಗಿ ರಸ್ತೆ ಕಾಂಕ್ರೀಟೀಕರಣ 9 ಇಂಚಿ ಎತ್ತರವಾಗಿರುವ ಹಿನ್ನೆಲೆಯಲ್ಲಿ ತೂಮಿನಾಡು ಜಂಕ್ಷನಿನಲ್ಲಿ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ಕಳೆದ ಸುರಿಯುತ್ತಿರುವ ಮಳೆ ನೀರು ಅಂಗಡಿಯೊಳಗೆ ನುಗ್ಗಿದೆ. ಹಾಗಿದ್ದರೆ ಸಣ್ಣ ಪ್ರಮಾಣದ ಮಳೆಯಲ್ಲಿ ಈ ರೀತಿ ನೀರು ಕಟ್ಟಿ ನಿಂತರೆ ಮಳೆಗಾಲದಲ್ಲಿ ಇಲ್ಲಿಯ ಅವಸ್ಥೆ ಏನಾಗಿರಬಹುದೆಂಬುದು ವ್ಯಾಪಾರಿಗಳ ಪ್ರಶ್ನೆ

ಕಾಂಕ್ರೀಟ್ 9 ಇಂಚಿ ಎತ್ತರ ಇರುವ ಹಿನ್ನೆಲೆಯಲ್ಲಿ ಸಮಾನ ರೀತಿಯಲ್ಲಿ ಮಣ್ಣು ಹಾಕಿದರೆ ಮಾತ್ರ ವಾಹನಗಳು ರಸ್ತೆಗೆ ಹತ್ತ ಬಹುದಾಗಿದೆ. ಇಲ್ಲವಾದರೆ ವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು. ರಸ್ತೆ ಕಾಮಗಾರಿಗಳ ಬಗ್ಗೆ ಊರಿನವರಿಂದ ಕೆಲವೊಂದು ದೂರುಗಳು ಲಭಿಸಿದ ಹಿನ್ನೆಲೆಯಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆ ತಂಡ ಸಂದರ್ಶನ ನಡೆಸಿ ಕಾಮಗಾರಿಯ ವಿವರವನ್ನು ಮಾಹಿತಿ ಹಕ್ಕು ಖಾಯಿದೆ ಪ್ರಕಾರ ಪಡಕೊಂಡಿದೆ.

ಮೂದಲಿನ ರಸ್ತೆಯನ್ನು ಅಗೆದು ತೆಗೆದು ಸ್ವಲ್ಪವಾದರೂ ಅಡಿ ಭಾಗದಿಂದ ಕಾಂಕ್ರೀಟ್ ಹಾಕದೇ ಅಲ್ಲಿಂದಲ್ಲಿಗೆ ಕಾಂಕ್ರೀಟ್ ಹಾಕಿದ ಕಾರಣ ಕಾಂಕ್ರೀಟ್ ಒಂಭತ್ತು ಇಂಚಿ ಎತ್ತರವಾಗಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೂ ಅಯೋಗ್ಯವಾಗಿರುವುದಾಗಿ ಆರೋಪಿಸಲಾಗಿದೆ. ಜೊತೆಯಾಗಿ ಕಾಮಗಾರಿಗೆ ಬಳಸಿದ ಸಾಮಗ್ರಿಗಳು ಕಳಪೆ ಗುಣಮಟ್ಟದಾಗಿದ್ದು ಈ ಬಗ್ಗೆ ಪ್ರಶ್ನಿಸುವಾಗ ಇಂಜಿನಿಯರಾಗಲೀ ಗುತ್ತಿಗೆದಾರನಾಗಲೀ ಯಾವುದೇ ಪ್ರತಿಕ್ರಿಯೆ ನೀಡದೆ ಅವರ ಇಷ್ಟದಲ್ಲಿ ಕಳಪೆ ಕಾಮಗಾರಿಯಲ್ಲಿ ರಸ್ತೆ ನಿರ್ಮಾಣವಾಗಿರುವುದಾಗಿ ಗ್ರಾಮಸ್ಥರು ಅರೋಪಿಸಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಹಾರ್ಬರ್ ಮಂತ್ರಿ, ಜಿಲ್ಲಾಧಿಕಾರಿ, ವಿಜಿಲೆನ್ಸ್ ಅಧಿಕಾರಿಗಳಿಗೆ ಗ್ರಾಮಸ್ಥರು ಹಾಗೂ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ದೂರು ನೀಡಿದೆ.

Related posts

Leave a Reply