Header Ads
Header Ads
Header Ads
Breaking News

ತೂಮಿನಾಡು ಪದವು ನೂತನ ಕಾಂಕ್ರೀಟ್ ರಸ್ತೆ ರಸ್ತೆ ಬದಿಗೆ ಮಣ್ಣು ಹಾಕುವುದಿಲ್ಲವೆಂಬ ಹಟದಲ್ಲಿ ಗುತ್ತಿಗೆದಾರ ಪ್ರತಿಭಟನೆಯತ್ತ ಹೆಜ್ಜೆ ಇಡುತ್ತಿರುವ ಸ್ಥಳೀಯರು

ಮಂಜೇಶ್ವರ: ಇತ್ತೀಚೆಗೆ ಕಾಸರಗೋಡು ಅಭಿವೃದ್ದಿ ಫಂಡ್ ನಿಂದ ಹಾರ್ಬರ್ ಇಂಜಿನಿಯರುಗಳ ಉಸ್ತುವಾರಿಯಲ್ಲಿ ನಡೆದ ತೂಮಿನಾಡು ಪದವು ಕಾಂಕ್ರೀಟ್ ರಸ್ತೆ ಕಳಪೆ ಕಾಮಗಾರಿಗೊಂದು ಮೂಕ ಸಾಕ್ಷಿಯಾಗಿರುವುದಾಗಿ ಊರವರಿಂದ ಆರೋಪಗಳು ಕೇಳಿ ಬರುತ್ತಿವೆ. ಈಗಾಗಲೇ ಊರವರು ಸಂಬಂಧಪಟ್ಟವರಿಗೆ ದೂರುಗಳನ್ನು ನೀಡಿದ ಬಗ್ಗೆಯೂ ಮಾಹಿತಿಗಳು ಲಭಿಸಿವೆ.

ಆದರೆ ಇದೀಗ ಕಾಂಕ್ರೀಟ್ ಎತ್ತರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ವಾಹನಗಳು ಈ ರಸ್ತೆಗೆ ಹತ್ತಲು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮೊದಲು ಸರಿಯಾದ ರೀತಿಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಿಕೊಡುವುದಾಗಿ ಊರವರಿಗೆ ಭರವಸೆಯನ್ನು ನೀಡಿದ ಗುತ್ತಿಗೆದಾರ ಇದೀಗ ಊರವರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ಟಿಪ್ಪರ್ ಲಾರಿಗಳಲ್ಲಿ ಮಣ್ಣುಗಳನ್ನು ತಂದು ಹಾಕುವಾಗ ಊರವರು ತಡೆಯೊಡ್ಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತಲೆ ಕೆಡಿಸಿಕೊಳ್ಳದ ಗುತ್ತಿಗೆದಾರ ತಾನು ಮಾಡಿದ್ದೇ ಸರಿ ಎಂಬಂತೆ ಸ್ಥಳದಿಂದ ಜಾಗ ಖಾಲಿ ಮಾಡಿರುವುದಾಗಿ ಊರವರು ಆರೋಪಿಸುತಿದ್ದಾರೆ. ಸರಿಯಾದ ರೀತಿಯಲ್ಲಿ ಮಣ್ಣು ಹಾಕದೇ ಇದ್ದರೆ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸುವುದಾಗಿ ಊರವರು ಎಚ್ಚರಿಕೆಯನ್ನು ನೀಡಿದ್ದಾರೆ.

ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply