Header Ads
Header Ads
Header Ads
Breaking News

ತೂಮಿನಾಡು ? ಪದವು ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

ಮಂಜೇಶ್ವರ : ಕಾಸರಗೋಡು ಅಭಿವೃದ್ದಿ ಯೋಜನೆಯ 2016 ? 2017 ರ ಭಾಗವಾಗಿ ಆಡಳಿತಾನುಮತಿ ಲಭಿಸಿದ ಹಾಗೂ ಹಾರ್ಬರ್ ಇಂಜಿಯರಿಂಗ್ ಇಲಾಖೆ ಮುಖಾಂತರ ನಡೆಸಲ್ಪಡುವ ಮಂಜೇಶ್ವರ ಗ್ರಾ. ಪಂ. ನ 2 ನೇ ವಾರ್ಡ್ ತೂಮಿನಾಡು ? ಪದವು (685) ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣ ಚಾಲನೆ ದೊರಕಿದೆ.

ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ಒಂದು ತಿಂಗಳು ನಿಷೇಧವನ್ನು ಹೇರಿ ರಸ್ತೆ ಸಂಪೂರ್ಣ ಮುಚ್ಚುಗಡೆಗೊಳ್ಳಲಿರುವುದಾಗಿ ಅಧಿಕೃತರು ಈಗಾಗಲೇ ತಿಳಿಸಿದ್ದಾರೆ. ಲೋಕಪಯೋಗಿ ಇಲಾಖೆಯ ವತಿಯಿಂದ ತೂಮಿನಾಡು ಬಾಚಲಿಕೆ ರಸ್ತೆ ನಿರ್ಮಾಣಕ್ಕಾಗಿ ಗುತ್ತಿಗೆದಾರ ಒಂದು ಕೋಟಿ ಅರುವತ್ತೈದು ಲಕ್ಷ ರೂ. ಪಡೆದು ಕಳಪೆ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಈ ರಸ್ತೆ ಒಂದು ವರ್ಷಕ್ಕಿಂತ ಮೊದಲೇ ಹದೆಗೆಟ್ಟಿತ್ತು.

ಬಳಿಕ ವಾರ್ಡ್ ಸದಸ್ಯರಲ್ಲಿ ಇದಕ್ಕೊಂದು ಪರಿಹಾರವನ್ನು ಕಂಡು ಕೊಳ್ಳುವಂತೆ ಗ್ರಾಮಸ್ಥರು ಬೇಡಿ ಕೊಂಡಿದ್ದರೂ ಯಾವುದೇ ಸ್ಪಂಧನೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯ ಕೆಲವು ನಾಗರಿಕರು ಹಾರ್ಬರ್ ಇಂಜಿನಿಯವರಲ್ಲಿ ನಡೆಸಿದ ವಿನಂತಿಯಂತೆ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಅಭಿವೃದ್ದಿ ಯೋಜನೆಯ 2016 ? 2017 ರಲ್ಲಿ ಈ ರಸ್ತೆ ಕಾಮಗಾರಿಯನ್ನು ನಡೆಸುವಂತೆ ನಿರ್ಧೇಶಿಸಿದ ಹಿನ್ನೆಲೆಯಲ್ಲಿ ಇದೀಗ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯಲ್ಲಿ ಕಳಪೆ ಕಾಮಗಾರಿಗಳು ಕಂಡು ಬಂದಲ್ಲಿ ಮಂಜೇಶ್ವರ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿ ಅವರ ನಿರ್ಧೇಶ ಹಾಗೂ ಸಲಹೆಯನ್ನು ಪಡ ಕೊಂಡು ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಸ್ಥಳೀಯರು ಎಚ್ಚರಿಕೆಯ ಕರೆ ಗಂಟೆ ಭಾರಿಸಿದ್ದಾರೆ.

Related posts

Leave a Reply