Header Ads
Header Ads
Header Ads
Breaking News

ತೂಮಿನಾಡು ಪ್ರಯಾಣಿಕ ಇಳಿಯುವ ಮುನ್ನವೇ ಬಸ್ಸು ಚಲಾಯಿಸಿದ ಕರ್ನಾಟಕ ಸಾರಿಗೆ ಬಸ್ಸು ಚಾಲಕ  ಅಪಘಾತ ನೋಡಿಯೂ ನಿಲುಗಡೆಗೊಳಿಸದ ಚಾಲಕ: ಪ್ರಯಾಣಿಕ ಗಾಯಗಳೊಂದಿಗೆ ಆಸ್ಪತ್ರೆಗೆ

ಮಂಜೇಶ್ವರ : ಪ್ರಯಾಣಿಕರೊಬ್ಬರು ಬಸ್ಸು ಇಳಿಯುವ ಮುನ್ನವೇ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಬಸ್ಸಿನಿಂದ ಕೆಳಗೆ ಬಿದ್ದು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಸರಗೋಡು ಕೊಲ್ಲಂಗಾನ ವಿದ್ಯಾನಗರ ನಿವಾಸಿ ಇಬ್ರಾಹಿಂ (48) ಅಪಘಾತಕ್ಕೀಡಾದ ಪ್ರಯಾಣಿಕ . ಇವರನ್ನು ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕರ್ನಾಟಕ ಸಾರಿಗೆ ಇಲಾಖೆಯ ಮಂಗಳೂರು ಕಾಸರಗೋಡು ರೂಟಿನಲ್ಲಿ ಸೇವೆಯನ್ನು ನೀಡುತ್ತಿರುವ ಕೆ ಎ 19 ಎಫ್ 2259 ನೋಂದಾವಣೆ ಸಂಖ್ಯೆಯ ಬಸ್ಸು ಚಾಲಕನ ಬೇ ಜವಾಬ್ದಾರಿತನದಿಂದ ಶುಕ್ರವಾರ ಬೆಳಿಗ್ಗೆ 10.40 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಇಬ್ರಾಹಿಂ ರವರು ಕುಂಬಳೆಯಿಂದ ಈ ಬಸ್ಸಿಗೆ ಹತ್ತಿದ್ದರು ತೂಮಿನಾಡಿನಲ್ಲಿ ಇಳಿಯುವಾಗ ಇಳಿಯುವ ಮುನ್ನವೇ ಚಾಲಕ ಬಸ್ಸು ಚಲಾಯಿಸಿದ್ದಾನೆ. ಇತ್ತೀಚಿನ ದಿನಗಳಲ್ಲಿ ಕಾಸರಗೋಡು ,ಮಂಗಳೂರು ರೂಟಿನಲ್ಲಿ ಕರ್ನಾಟಕ ಸಾರಿಗೆ ಬಸ್ಸಿನ ಚಾಲಕರ ಬೇ ಜವಾಬ್ದಾರಿಯಿಂದ ಅಪಘಾತಗಳು ಹೆಚ್ಚಾಗುತ್ತಾ ಇದೆ.

Related posts

Leave a Reply