Header Ads
Header Ads
Header Ads
Breaking News

ತೂಮಿನಾಡು ಹೆದ್ದಾರಿ ಪಕ್ಕದಲ್ಲೇ ಶೇಖರಣೆಗೊಂಡ ತ್ಯಾಜ್ಯ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಪರಿಸರದ ನಿವಾಸಿಗಳು ತೆರವಿಗೆ ಸ್ಪಂದಿಸದ ಅಧಿಕಾರಿಗಳು

ಮಂಜೇಶ್ವರ: ಮಂಜೇಶ್ವರ ವ್ಯಾಪ್ತಿಯ ತೂಮಿನಾಡು ರಾಷ್ಟ್ರೀಯ ಹೆದ್ದಾರಿಯ ಬಸ್ಸು ನಿಲ್ದಾಣದ ಪಕ್ಕದಲ್ಲೇ ತ್ಯಾಜ್ಯಗಳು ಶೇಖರಣೆಯಾಗುತ್ತಿದ್ದು, ಈ ಪರಿಸರದ ದುರ್ನಾತದಿಂದ ಸ್ಥಳೀಯರು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಡೆದಾಡುವಂತಹ ಪರಿಸ್ಥಿತಿ ಬಂದೊದಗಿದೆ.

ಬಾಡಿಗೆ ಫ್ಲಾಟ್ ಗಳಲ್ಲಿ ವಾಸಿಸುವವರು ಬೆಳಿಗ್ಗೆ ಜನ ಸಂಚಾರ ಇಲ್ಲದ ಸಮಯಗಳಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಮಾತ್ರವಲ್ಲದೆ ಬೈಕ್ ಹಾಗೂ ಕಾರುಗಳಲ್ಲಿ ಕೂಡಾ ತ್ಯಾಜ್ಯವನ್ನು ಬಿಸಾಡುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಕೊಳೆತ ತ್ಯಾಜ್ಯಗಳನ್ನು ಬೀದಿ ನಾಯಿಗಳು ಬಸ್ ನಿಲ್ದಾಣಕ್ಕೆ ಹಾಗೂ ಜನರು ನಡೆದಾಡುವ ರಸ್ತೆ ಮಧ್ಯೆ ತಂದು ಹಾಕುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಮುಂಚಿತವಾಗಿ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply