Header Ads
Header Ads
Breaking News

ತೃತೀಯ ಲಿಂಗಿಯಿಂದ ಹೊಟೇಲ್ ಉದ್ಯಮ

ತೃತೀಯ ಲಿಂಗಿಯರಿಗೆ ನಿತ್ಯ ಅನುಕಂಪ ತೋರಿದ ಜಿಲ್ಲೆ ಉಡುಪಿ . ಈ ಹಿಂದೆ ಉಡುಪಿಯಲ್ಲಿ ತೃತೀಯಲಿಂಗಿಯೊಬ್ಬಾಕೆ ಚಿತ್ರ ನಟಿಯಾಗಿ ಗಮನ ಸೆಳೆದಿದ್ದಾಳೆ.ಜಿಲ್ಲಾಡಳಿತ ಹಾಗೂ ಸಮಾಜ ಸೇವಕರು ಒಟ್ಟಾಗಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಂಡುವುದಕ್ಕೆ ಮುಂದಾಗಿದ್ದಾರೆ. ಅನೇಕ ಯೋಜನೆಗಳು ರಾಜ್ಯದಲ್ಲೇ ಮೊದಲು ಕಾರ್ಯಗತಗೊಂಡ ಕೃಷ್ಣನಗರಿ ಈಗ ಇಂತಹದ್ದೇ ಮತ್ತೊಂದು ಪ್ರಥಮಕ್ಕೆ ಸಾಕ್ಷಿಯಾಗುತ್ತಿದೆ. ಅದೆಂದರೆ ತೃತೀಯ ಲಿಂಗಿಗಳಿಗೆ ಸ್ವಾವಲಂಬಿ ಮತ್ತು ಸ್ವಾಭಿಮಾನಿಬದುಕು ನಡೆಸಲು ಅವಕಾಶ ಮಾಡಿಕೊಡುವುದು.ಉಡುಪಿಯ ಮಣಿಪಾಲದಲ್ಲಿ ಜಿಲ್ಲಾಡಳಿತ ಇಂತಹದ್ದೊಂದು ಪ್ರಯತ್ನಕ್ಕೆ ಇಳಿದಿದೆ. .ಏನದು? ಈ ಸ್ಟೋರಿ ನೋಡಿ…

ತೃತೀಯ ಲಿಂಗಿಗಳೆಂದರೆಎಲ್ರಿಗೂ ತಾತ್ಸಾರ… ಅವರನ್ನು ಮನುಷ್ಯರಂತೆ ನೋಡುವವರೇ ವಿರಳ.ಹೀಗಾಗಿ ಅವರು ಹೊಟ್ಟೆ ಹೊರೆದುಕೊಳ್ಳುವುದಕ್ಕೂ ಪಡುವ ಪಾಡು ಅಷ್ಟಿಷ್ಟಲ್ಲ.ಕೆಲವೊಮ್ಮೆ ಭಿಕ್ಷೆ ಬೇಡುತ್ತಾ ,ಸಮಾಜದ ಮುಂದೆ ತಿರಸ್ಕೃತರಾಗಿ ಬದುಕುವವರೇ ಹೆಚ್ಚು.ಇಂಥವರಗೊಂದು ಸ್ವಾವಲಂಬಿ ಬದುಕು ಕೊಟ್ಟರೆ ಹೇಗೆ?ಎಂದು ಯೋಚಿಸಿದವರು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್…ಇದೀಗ ಉಡುಪಿಯ ಮಣಿಪಾಲದಲ್ಲಿ ತೃತೀಯ ಲಿಂಗಿಗಳಿಗೆಂದೇ ಕ್ಯಾಂಟೀನ್ ಒಂದನ್ನು ನಡೆಸಲು ಅನುಮತಿ ನೀಡಲಾಗಿದೆ.ನಗರದ ಟೈಗರ್ ಸರ್ಕಲ್ ಸಮೀಪ ಈ ಕ್ಯಾಂಟೀನನ್ನು ತೃತೀಯ ಲಿಂಗಿಗಳಾದ ಲಾವಣ್ಯ ,ದೀಪಿಕಾ ಮತ್ತು ಸಂಜೀವ್ ಎಂಬ ವರು ನಡೆಸಉತ್ತಿದ್ದಾರೆ.ಕ್ಯಾಂಟೀನ್ ನಲ್ಲಿ ಚಿಕನ್ ಮತ್ತು ಮೊಟ್ಟೆಯಿಂದ ಮಾಡಿದ ತಿನಿಸುಗಳಿವೆ.ಒಂದುತಿಂಗಳಿನಿಂದ ಈ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ.

ಉಡುಪಿಯಲ್ಲಿ ಅನೇಕ ತೃತೀಯ ಲಿಂಗಿಗಳಿದ್ದಾರೆ.ಆದರೆ ಪ್ರಾರಂಭದಲ್ಲಿ ಈಗ ಮೂವರಿಗೆ ಸ್ವಾವಲಂಬಿ ಜೀವನ ನಡೆಸಲು ಪ್ರೋತ್ಸಾಹ ನೀಡಿ ,ಮುಂದಿನ ದಿನಗಳಲ್ಲಿ ಇನ್ನಷ್ಟು ಜನರಿಗೆ ಇಂತಹದ್ದೇ ಪ್ರೋತ್ಸಾಹ ನೀಡುವ ಯೋಚನೆ ಇದೆ.ಈಗ ತೃತೀಯ ಲಿಂಗಿಗಳು ನಡೆಸುವ ಕ್ಯಾಂಟೀನ್ ನಲ್ಲಿ ಚಿಕನ್ ಕಬಾಬ್ ,ಚಿಕನ್ ಬಿರಿಯಾನಿ ,ಎಗ್ ಬಿರಿಯಾನಿ ಸಹಿತ ಹಲವು ಬಗೆಯ ತಿನಿಸುಗಳಿವೆ.ರೇಟ್ ಕೂಡ ರೀಸನೇಬಲ್ .ಮಣಿಪಾಲ ಆಸುಪಾಸಿನ ಆಟೋ ಚಾಲಕರು ,ಕಾರ್ಮಿಕರು ಮತ್ತು ಮಧ್ಯಮವರ್ಗದ ಮಂದಿ ಇಲ್ಲಿಗೆ ಬಂದು ತಂಡಿ ತಿಂದು ಹೋಗುವ ಮೂಲಕ ಇವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಮಣಿಪಾಲ ವಿದ್ಯಾನಗರಿಯೂ ಹೌದು..ಈ ಕ್ಯಾಂಟೀನ್ ನಲ್ಲಿ ಗುಣಮಟ್ಟದ ಮತ್ತು ಶುಚಿರುಚಿಯಾದ ತಿಂಡಿತಿನಿಸುಗಳನ್ನು ಮಾಡಿದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನೂ ಸೆಳೆಯಬಹುದು.ಒಟ್ಟಾರೆ ಉಡುಪಿ ಜಿಲ್ಲಾಡಳಿತ ಮತ್ತು ಸಾಮಾಜಕ ಕಾರ್ಯಕರ್ತರು ಪ್ರಾರಂಭದ ಒಂದು ಹೆಜ್ಜೆಯನ್ನು ಇಟ್ಟಿದ್ದಾರೆ.ಇದುಸಣ್ಣ ಹೆಜ್ಜೆ ಎನಿಸಿದರೂ ,ಇದರ ಹಿಂದಿ ಧ್ಯೇಯೋದ್ದೇಶ ಮಾತ್ರ ತುಂಬ ದೊಡ್ಡದು.ಇದು ಉಡುಪಿಯಲ್ಲ ಯಶಸ್ವಿಯಾಗಿ ,ರಾಜ್ಯದ ಇತರೆಡೆಗಳಿಗೂ ವಿಸ್ತರಿಸಲಿ ಎಂದು ಹಾರೈಸೋಣ.

Related posts

Leave a Reply