Header Ads
Header Ads
Breaking News

ತೆಂಕನಿಡಿಯೂರಿನಲ್ಲಿ ಕೆಸರ್‌ಡೊಂಜಿ ದಿನ,  ಯುವ ಸಮುದಾಯಕ್ಕೆ ಕೆಸರಿನ ಮಹತ್ವದ ಅರಿವು


ಸದಾ ಬ್ಯುಸಿ ಲೈಫಿನಲ್ಲಿ ಮಣ್ಣಿನ ಮಹತ್ವವನ್ನೇ ಮರೆತಿದ್ದ ಈ ಪೇಟೆ ಮಂದಿ ಅಂದು ತೆಂಕನಿಡಿಯೂರಿನಲ್ಲಿ ಮಣ್ಣಿನ ಸತ್ವ ಮಹತ್ವ ಅರಿಯಲು ಕೆಸರಲ್ಲೇ ದಿನ ಕಳೆದು ಆಟವಾಡಿ ರಜೆಯ ಮಜಾ ಸವಿದರು.
ತೆಂಕನಿಡಿಯೂರಿನ ವೀರ ಮಾರುತಿ ವ್ಯಾಯಾಮ ಶಾಲೆ ಸಂಸ್ಥೆಯ ಯುವಕರು, ಸಮಾಜದ ಮುಖ್ಯಸ್ಥರು ಜೊತೆಯಾಗಿ ಕೆಸರಿನಲ್ಲಿ ಆಟೋಟದ ಸ್ಪರ್ಧೆಯನ್ನು ಆಯೋಜಿಸಿ ತಿಳಿಹೇಳಿದರು. ಮುಂದಿನ ಜನಾಂಗಕ್ಕೆ ಕೆಸರಲ್ಲಿ ಅಡಗಿರುವ ಮಣ್ಣಿನ ಮಹತ್ವವನ್ನು ಪ್ರ್ಯಾಕ್ಟಿಕಲ್ ಮೂಲಕ ತಿಳಿಹೇಳಲೆಂದೇ ಅಲ್ಲಲ್ಲಿ ಕೆಸರಡೊಂಜಿ ದಿನ ಎಂದು ಆಚರಿಸಲಾಗುತ್ತಿದೆ ಅದರಂತೆ ತೆಂಕನಿಡಿಯೂರಿನ ಸಂಸ್ಥೆ ಮೂರನೇ ವರ್ಷ ಕೂಡ ಕೆಸರಡೊಂಜಿ ದಿನ ಹಮ್ಮಿಕೊಂಡು ಮಕ್ಕಳಿನಿಂದ ಹಿಡಿದು ಅಬಾಲವೃದ್ಧರವರೆಗಿನವರಿಗೆ ಓಟ, ಕೆಸರಲ್ಲಿ ತೆಂಗಿನ ಕಾಯಿ ಹುಡುಕಾಟ, ಮಡಿಕೆ ಒಡೆಯುವುದು, ಮೂರು ಕಾಲಿನ ಓಟ, ಹಗ್ಗ ಜಗ್ಗಾಟ ಹೀಗೆ ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು ಈ ಸ್ಪರ್ಧೆಗಳಲೆಲ್ಲ ಎಲ್ಲಾ ವಯೋಮಾನದ ಪುರುಷರು, ಮಹಿಳೆಯರು, ಯುವಕ ಯುವತಿಯರು ನಾಮುಂದು ತಾಮುಂದು ಎಂದು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಖತ್ ಎಂಜಾಯ್ ಮಾಡಿದರು.
ಈ ಸ್ಪರ್ಧೆಗೂ ಮುನ್ನ ತುಳುನಾಡ ಸಂಸ್ಕೃತಿಯಂತೆ ಕೆಸರಿಗೆ ತನು ಬಿಡುವ ಮೂಲಕ ವೇದಿಕೆಯಲ್ಲಿ ತೆನೆ ಅರಳಿಸಿ ಉದ್ಘಾಟಿಸಲಾಯಿತು. ಇದೇ ಸಂಧರ್ಭದಲ್ಲಿ ಸ್ಪರ್ಧಿಗಳನ್ನುದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ತೋನ್ಸೆ, ಒಂದು ಕಾಲದಲ್ಲಿ ಮಕ್ಕಳು ಕೆಸರಿನೊಂದಿಗೆ ಬೆಳೆಯುತ್ತಿದ್ದರು. ಕೆಸರಿನಲ್ಲಿರುವ ಸತ್ವ ಇಂದಿನ ಮಕ್ಕಳಿಗೆ ತಿಳಿಯುತ್ತಿಲ್ಲ. ಕೆಸರಿನಲ್ಲಿರುವ ಸತ್ವ, ಮಹತ್ವ, ಸಂಪ್ರದಾಯ, ಸಂಸ್ಕೃತಿ ಅರಿವಾಗಬೇಕು ಈ ನಿಟ್ಟಿನಲ್ಲಿ ವರ್ಷಕೊಂದು ದಿನವಾದರೂ ಈ ಕೆಸರಿನ ಮಹತ್ವ ತಿಳಿಸಲು ವೀರಮಾರುತಿ ವ್ಯಾಯಾಮ ಶಾಲೆ ಸಂಸ್ಥೆ ಕೆಸರಡೊಂಜಿ ದಿನ ಆಯೋಜಿಸಿದೆ ಎಂದು ಶ್ಲಾಘಿಸಿದರು.
ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭಾಗವಹಿಸಿ ಮಾತನಾಡಿ, ಕೆಸರುಗದ್ದೆಯಾಟ ಕೇವಲ ಕ್ರೀಡೆಗೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗೂ ಪ್ರೇರಣೆಯಾಗಬೇಕಿದೆ. ಇಂದಿನ ಯುವಜನತೆ ಕೃಷಿಯ ಕುರಿತು ನಿರಾಸಕ್ತಿ ಹೊಂದಿರುವುದರಿಂದಲೇ ಕೃಷಿ ಅವನತಿಯತ್ತ ಸಾಗಿದೆ ಕೆಸರಿನ ಬಗ್ಗೆ ಆಸಕ್ತಿ ಹೆಚ್ಚಿಸುವುದರೊಂದಿಗೆ ಕೃಷಿಯ ಅರಿವು ಆಸಕ್ತಿ ಹೆಚ್ಚಿಸುವ ಕಾರ್ಯ ಇಂತಹ ಆಟಗಳಿಂದ ನಡೆಯಲಿ ಎಂದರು. ಒಟ್ಟಿನಲ್ಲಿ ಈ ಕೆಸರಿನಾಟ ಎಲ್ಲರ ಗಮನ ಸೆಳೆಯುವುದರೊಂದಿಗೆ ಆಸಕ್ತಿಯ ಕೇಂದ್ರ ಬಿಂದುವಾಗುವುದರೊಂದಿಗೆ ಪೇಟೆಯ ಬ್ಯುಸಿ ಲೈಫಿನ ಜಂಜಾಟದಿಂದ ರಿಲ್ಯಾಕ್ಸ್ ನೀಡಿರುವುದಂತೂ ಸತ್ಯ.

Related posts

Leave a Reply