Breaking News

ತೆಂಕ ಎರ್ಮಾಳಿನಲ್ಲಿ ಮರ ಬಿದ್ದು ಮನೆಗೆ ಪೂರ್ಣ ಹಾನಿ,  ಇಬ್ಬರು ಮಕ್ಕಳು ಸೇರಿ ಮೂವರಿಗೆ ಗಾಯ


ಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ ಮನೆಗೆ ಸಂಪೂರ್ಣ ಹಾನಿಯಾದ ಘಟನೆ ಪಡುಬಿದ್ರೆಯ ತೆಂಕ ಎರ್ಮಾಳು ಕೆನರಾ ಬ್ಯಾಂಕ್ ಬಳಿಯ ಕಂಜನ ತೊಟದ ಮೆನಯಲ್ಲಿ ನಡೆದಿದೆ.
ಈ ಘಟನೆಯಲ್ಲಿ ಮಕ್ಕಳಿಬ್ಬರು ಸಹಿತ ಮೂವರಿಗೆ ತಲೆ, ಕೈಕಾಲಿಗೆ ಗಾಯವಾಗಿದೆ. ಗಾಯಗೊಂಡವರನ್ನ ಲತಾ, ಇವರ ಮಕ್ಕಳಾದ ಸಿಂಚನ ಹಾಗೂ ನಿಶಾಂತ್ ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿ ಜೀವಿಸುತ್ತಿರುವ ಚಿಕ್ಕಿ ಪೂಜಾರ್‍ತಿ ಎಂಬವರು ವಾಸಿಸುತ್ತಿರುವ ಕಂಜನತೋಟ ಮನೆಗೆ ಮುಂಜಾನೆ ಆರರ ಸುಮಾರಿಗೆ ಬೀಸಿದ ಬಾರೀ ಗಾಳಿಗೆ, ಪಕ್ಕದ ಮರದ ರೆಂಬೆಯೊಂದು ಮುರಿದು ಬಿದ್ದ ಪರಿಣಾಮ ಮನೆ ಸಂಪೂರ್ಣ ಧ್ವಂಸಗೊಂಡು, ಸುಮಾರು ಮೂರು ಲಕ್ಷ ನಷ್ಟ ಸಂಭವಿಸಿದೆ, ಇದೇ ವೇಳೆ ಕೋಣೆಯಲ್ಲಿ ಮಲಗಿದ್ದ ತಾಯಿ ಮಕ್ಕಳ ಮೇಲೆ ಮರದ ತುಂಡು ಸಹಿತ ಹೆಂಚಿನ ತುಂಡುಗಳು ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳ ಮೇಲೆ ಬೀಳುತ್ತಿದ್ದ ಹೆಂಚುಗಳಿಂದ ಮಕ್ಕಳಿಗೆ ಆಗುತ್ತಿದ್ದ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ತಾಯಿ ಲತಾ, ಮಕ್ಕಳ ಮೇಲೆ ಅಗಾತವಾಗಿ ಮಲಗಿದ್ದರಿಂದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾದರೆ ಆಕೆಯ ತಲೆಗೆ ಗಂಭೀರ ಏಟು ತಗುಲಿದೆ.
ತಕ್ಷಣ ಗಾಯಾಳುಗಳನ್ನು ಸ್ಥಳೀಯ ಪಡುಬಿದ್ರಿಯ ಸಿದ್ಧಿವಿನಾಯಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನಷ್ಟು ಅಪಾಯಕಾರಿ ಮರಗಳು ಈ ಭಾಗದಲ್ಲಿದ್ದು ಅದನ್ನು ತೆರವುಗೊಳಿಸುವ ಕಾರ್ಯ ಆಗಬೇಕಾಗಿದೆ. ಸ್ಥಳಕ್ಕೆ ತೆಂಕ ಗ್ರಾ. ಪಂ. ಗ್ರಾಮಲೆಕ್ಕಿಗ ಅರುಣ್ ಕುಮಾರ್ ಹಾಗೂ ಸಹಾಯಕಿ ಶೈಲಜ ಆಗಮಿಸಿ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಬಡ ಕುಟುಂಬವಾದ ಕಾರಣ ಅವರಿಗೆ ದೊರಕಬಹುದಾದ ಪರಿಹಾರ ಮೊತ್ತವನ್ನು ಶೀಘ್ರದಲ್ಲಿ ದೊರಕಿಸಿಕೊಡುವ ಭರವಸೆಯನ್ನ ವ್ಯಕ್ತ ಪಡಿಸಿದ್ದಾರೆ.

Related posts

Leave a Reply