Header Ads
Header Ads
Breaking News

ತೆಂಕ ಎರ್ಮಾಳು ಕಿನಾರ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವ.

ತೆಂಕ ಎರ್ಮಾಳು ಕಿನಾರ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಮ್ಮ ಹಿರಿಯರು ವಿದ್ಯಾಹೀನರಾಗಿದ್ದರೂ ಕೂಡಾ ಸಮಾಜಕ್ಕೆ ವಿದ್ಯಾಭ್ಯಾಸ ದೊರಕಬೇಕು ಎಂಬ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ, ಅಂಥಹ ವಿದ್ಯಾಸಂಸ್ಥೆಗಳು ಇಂದು ಗ್ರಾಮಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಮಾಡುತ್ತಿದೆ ಎಂದರು.ಇದೇ ಸಂದರ್ಭ ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ.ಪಂ. ಸದಸ್ಯ ಕೇಶವ ಮೊಯಿಲಿ, ತೆಂಕ ಗ್ರಾ.ಪಂ. ಅಧ್ಯಕ್ಷೆ ಅರುಣಾ ಕುಮಾರಿ, ಉಪಾಧ್ಯಕ್ಷ ರತ್ನಾಕರ್ ಕೋಟ್ಯಾನ್, ವಿದ್ಯಾ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್, ಮೊಗವೀರ ಸಭಾದ ಅಧ್ಯಕ್ಷ ದಾಮೋದರ ಸುವರ್ಣ, ಮನೋಹರ್ ಕೆ. ಪುತ್ರನ್, ಮುಖ್ಯ ಶಿಕ್ಷಕಿ ಪ್ರೀತಿ ಸುವರ್ಣ, ವೈ. ಸೇಸು, ಪ್ರಭಾಕರ್ ಪುತ್ರನ್, ಬಿ.ಎಂ. ಸುವರ್ಣ, ಸುಧಾಕರ್ ಕೋಟ್ಯಾನ್ ಮುಂತಾದವರಿದ್ದರು.

Related posts

Leave a Reply