Header Ads
Header Ads
Header Ads
Breaking News

ತೆಂಗು ಕೀಟ ಬಾಧೆ, ಮೀನು ಸಾಕಣೆ ಪ್ರಾತ್ಯಕ್ಷಿಕೆ ಮೂಡಬಿದರೆಯ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಕಾರ್ಯಾಗಾರ

ಮೂಡುಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರ, ಮಂಗಳೂರಿನ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮೂಡಬಿದಿರೆ ಇನ್ನರ್‌ವೀಲ್ ಕ್ಲಬ್ ಮತ್ತು ಎಂ.ಸಿ.ಎಸ್. ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ತೆಂಗು ಕೀಟ ಬಾಧೆ ಮತ್ತು ಮೀನು ಸಾಕಣೆ ಕುರಿತಾದ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರವು ಮಂಗಳವಾರ ಎಂಸಿ‌ಎಸ್ ಬ್ಯಾಂಕ್ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆಯಿತು.

ರಜತ ಸಂಭ್ರಮದಲ್ಲಿರುವ ಮೂಡುಬಿದಿರೆ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದೆಡೆ ಕೀಟಬಾಧೆ ಇನ್ನೊಂದೆಡೆ ಮಂಗಗಳ ಹಾವಳಿಯಿಂದಾಗಿ ಜಿಲ್ಲೆಯಲ್ಲಿ ತೆಂಗು ಫಸಲು ಇಳಿಕೆಯಾಗಿದೆ. ಇಲಾಖೆ ರೈತರ ನೆರವಿಗೆ ಬಂದು ತೆಂಗು ಕೃಷಿಯನ್ನು ಉಳಿಸಬೇಕಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೇಮನಾಥ ಆಳ್ವ, ಸಿ‌ಇ‌ಓ ಉದಯ ಹೆಗ್ಡೆ ಆಡಳಿತ ಮಂಡಳಿ ಸದಸ್ಯ ಸಂಪತ್ ಸಾಮ್ರಾಜ್ಯ, ಸಹಾಯಕ ಕೃಷಿ ಅಽಕಾರಿ ಪ್ರದೀಪ್ ಡಿ’ಸೋಜ ಭಾಗವಹಿಸಿದ್ದರು. ಎಂಸಿ‌ಎಸ್ ಬ್ಯಾಂಕ್ ಸಿ‌ಇ‌ಓ ಚಂದ್ರಶೇಖರ ಎಂ., ಕೃ.ವಿ.ವಿ. ಕೇಂದ್ರದ ಉಪಾಧ್ಯಕ್ಷ ಸುಭಾಶ್ಚಂದ್ರ ಚೌಟ ಉಪಸ್ಥಿತರಿದ್ದರು.

ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply