Header Ads
Header Ads
Breaking News

ತೆಂಗು ಸಂಶೋಧನಾ ಘಟಕ ಮುಚ್ಚುವ ಯತ್ನದಲ್ಲಿ ಬಿಜೆಪಿ:ಉಮಾನಾಥ ರೈ ಆರೋಪ

ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾಲಯದ ಅಂಗಸಂಸ್ಥೆಯಾಗಿರುವ ಪುತ್ತೂರು ತಾಲೂಕಿನ ಕಿದುವಿನಲ್ಲಿರುವ ತೆಂಗು ಸಂಶೋಧನಾ ಘಟಕವನ್ನು ಮುಚ್ಚುವ ಯತ್ನದಲ್ಲಿ ಕೇಂದ್ರದ ಬಿಜೆಪಿ ಸರಕಾರವಿದೆ ಎಂದು ಕಾಂಗ್ರೇಸ್ ಕಿಸಾನ್ ಸಂಘದ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷ ಉಮಾನಾಥ ರೈ ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಬಿಜೆಪಿ ನಾಯಕರು ಇದ್ದ ಕಡೆಗಳೆಲ್ಲಾ 70ವರ್ಷದಲ್ಲಿ ಕಾಂಗ್ರೇಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ಆದರೆ ಇದೇ ಕಾಂಗ್ರೇಸ್ ಸರಕಾರ ಕೃಷಿಯ ಉತ್ತೇಜನಕ್ಕಾಗಿ ಹಲವಾರು ಸಂಸ್ಥೆಗಳನ್ನು ಹುಟ್ಟು ಹಾಕಿದೆ.

ಆದರೆ ಇದೀಗ ಬಿಜೆಪಿ ಮುಚ್ಚುವ ಯತ್ನ ಮಾಡುತ್ತಿದೆ. ಪುತ್ತೂರು ತಾಲೂಕಿನ ನೆಟ್ಟಣದಲ್ಲಿರುವ ಕಿದು ತೆಂಗು ತಳಿ ಸಂಶೋಧನಾ ಘಟಕವೂ ಇದರಲ್ಲಿ ಒಂದಾಗಿದ್ದು, ಸ್ಥಳೀಯ ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವು ಬಿಜೆಪಿ ಮುಖಂಡರು ಈ ಘಟಕವನ್ನು ಮುಚ್ಚಲು ಬಿಡುವುದಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದನ್ನು ಬಿಟ್ಟು, ಘಟಕವನ್ನು ಉಳಿಸುವ ಪ್ರಯತ್ನವನ್ನು ನಡೆಸಿಲ್ಲ ಎಂದು ಆರೋಪಿಸಿದ ಅವರು ಬರುವ ಮಾರ್ಚ್ ನಿಂದ ಕೇಂದ್ರದಿಂದ ಈ ಘಟಕಕ್ಕೆ ಬರುವ ಅನುದಾನವು ರದ್ದಾಗಲಿದೆ ಎಂದರು. ಕೊಳೆರೋಗದಿಂದ ಸಂಕಷ್ಟರಾದ ಕೃಷಿಕರಿಗೆ ರಾಜ್ಯ ಸರಕಾರದಿಂದ ಪರಿಹಾರ ಒದಗಿಸಿಕೊಡುವಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಏಳು ಬಿಜೆಪಿ ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

Related posts

Leave a Reply