Header Ads
Breaking News

ತೆರಿಗೆ ಸಂಗ್ರಹ ಮತ್ತು ಯೋಜನಾ ವೆಚ್ಚದಲ್ಲಿ ದಾಖಲೆ ಸೃಷ್ಟಿಸಿದ ವರ್ಕಾಡಿ ಗ್ರಾ.ಪಂ.

ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತು 2018-19 ನೇ ಸಾಲಿನಲ್ಲಿ 100 ಶೇಖಡಾ ವರಮಾನ ಸಂಗ್ರಹ ಮತ್ತು 100 ಶೇಖಡಾ ಯೋಜನಾ ಮೊತ್ತ ವಿನಿಯೋಗಿಸಿ ಇತಿಹಾಸ ಸೃಷ್ಟಿಸಿದೆ. ಪಂಚಾಯತು ಆಡಳಿತ ಮಂಡಳಿಯ ಮತ್ತು ನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದ ನಿರಂತರವಾದ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಚಾಯತ್ ಅಧ್ಯಕ್ಷರಾದ ಮಜೀದ್ ವರ್ಕಾಡಿ ಅವರು ವರ್ಕಾಡಿ ಗ್ರಾಮ ಪಂಚಾಯತಿಗೆ ಈ ಆರ್ಥಿಕ ವರ್ಷದಲ್ಲಿ 3.27 ಕೋಟಿ ರೂಪಾಯಿ ಯೋಜನೆ ಅನುದಾನ, 1.18 ಕೋಟಿ ಆಸ್ತಿ ಸಂರಕ್ಷಣೆ ಅನುದಾನ ದೊರಕಿದೆ ಎಂದ ಅವರು, ಕಾಸರಗೋಡು ಜಿಲ್ಲೆಯ 38 ಪಂ. ಗಳ ಪೈಕಿ ವರ್ಕಾಡಿ ಗ್ರಾ. ಪಂ. 2018-2019 ರ ಸಾಲಿನಲ್ಲಿ ಧ್ವೀತೀಯ ಸ್ಥಾನವನ್ನು ಪಡಕೊಂಡಿದೆ ಎಂದರು.

ಕಟ್ಟಡ ತೆರಿಗೆ, ಪರವಾನಿಗೆ ಫೀಸು, ವೃತ್ತಿ ತೆರಿಗೆ, ಕಟ್ಟಡ ಬಾಡಿಗೆ ಎಂಬೀ ವಲಯಗಳಲ್ಲಿ ಬರಬೇಕಾದ ಎಲ್ಲಾ ತರದ ಆದಾಯಗಳನ್ನು 100 ಶೇಖಡಾ ಸಂಗ್ರಹಿಸಿಯೂ ಪಂಚಾಯತು ಈ ವರ್ಷ ದಾಖಲೆ ಸೃಷ್ಟಿಸಿತು. ಪಂಚಾಯತಿಗೆ ಸಲ್ಲಬೇಕಾದ 35 ಲಕ್ಷ ರೂಪಾಯಿ ತೆರಿಗೆಯನ್ನು ಯಥಾಸಮಯದಲ್ಲಿ ವಸೂಲು ಮಾಡಿ ಈ ಸಾಧನೆ ಮಾಡಲಾಯಿತು.

ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 30 ಬಾವಿ, ಅಡಕಳ ಕಟ್ಟೆ ಬೋಳ್ನ, ಅರಿಬೈಲು ನಾಗಬ್ರಹ್ಮ ರಸ್ತೆ, ತೌಡುಗೋಳಿ ಕಾಪ್ರೆ ಅಡಕಳ ಕಟ್ಟೆ ಬೋಳ್ನ ರಸ್ತೆಗಳು ಸೇರಿದಂತೆ ಒಟ್ಟು 13 ರಸ್ತೆಗಳಿಗಾಗಿ ಈ ವರ್ಷ ಒಟ್ಟು 2,62,67,080 ರೂಪಾಯಿಗಳನ್ನು ಪಂಚಾಯತು ವಿನಿಯೋಗಿಸಿತು. 285 ಕುಟುಂಬಗಳಿಗೆ 100 ದಿವಸಗಳ 68750 ಉದ್ಯೋಗ ದಿನಗಳನ್ನು ಸೃಷ್ಟಿಸಿ ಜನರಿಗೆ ಉದ್ಯೋಗಾವಕಾಶವನ್ನು ಮಾಡಿಕೊಟ್ಟಿತು. ಮಾತ್ರವಲ್ಲ 1.6 ಕಿಲೋ ಮೀಟರ್ ದೂರ ಕಾಂಕ್ರೀಟ್ ರಸ್ತೆ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿ ಪಂಚಾಯತು ದಾಖಲೆ ಸೃಷ್ಟಿಸಿದೆ.

Related posts

Leave a Reply

Your email address will not be published. Required fields are marked *