Header Ads
Header Ads
Breaking News

ತೆಳು ಪ್ಲಾಸ್ಟಿಕ್ ನಿಂದ ಬರುತ್ತೆ ಕ್ಯಾನ್ಸರ್‌ನಂತಹ ಹಾನಿಕಾರಕ ಕಾಯಿಲೆ! ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್‌ರಿಂದ ಸೂಚನೆ

ತೆಳುವಾದ ಪ್ಲಾಸ್ಟಿಕ್‌ಗಳನ್ನು ಬಳಕೆ ಮಾಡುವುದರಿಂದ ಕ್ಯಾನ್ಸರ್‌ನಂತಹ ಹಾನಿಕಾರಕ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಕೈಗಳಿಲ್ಲದ 5೦ ಮೈಕ್ರೋನ್‌ಗೆ ಮೇಲ್ಪಟ್ಟ ಗ್ರಾಸರಿ ಬ್ಯಾಗ್‌ಗಳನ್ನು ಮಾಡಬೇಕು ಇಲ್ಲದಿದ್ದರೆ ಮುಂದಿನ ಶುಕ್ರವಾರದಿಂದ ತೆಳು ಪ್ಲಾಸ್ಟಿಕ್‌ಗಳನ್ನು ಬಳಕೆ ಮಾಡುವವರ ಮತ್ತು ನೀಡುವವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ತರಕಾರಿ ಮತ್ತು ಮೀನು ವ್ಯಾಪಾರಸ್ಥರಿಗೆ ಸೂಚನೆಯನ್ನು ನೀಡಿದ್ದಾರೆ. 

ವಾರದ ಸಂತೆಯಾಗಿರುವ ಶುಕ್ರವಾರದಂದು ಪುರಸಭಾ ಅಧಿಕಾರಿಗಳ ಜತೆಗೂಡಿ ಅವರು ತರಕಾರಿ, ಮೀನು ಹಾಗೂ ಮಾಂಸಗಳ ಮಾರ್ಕೆಟ್‌ಗೆ ಭೇಟಿ ನೀಡಿದ ಅವರು ವ್ಯಾಪಾರಸ್ಥರ ಜೊತೆ ಮಾತನಾಡಿ ಸರಕಾರವು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದೆ. ವಿಶೇಷವಾಗಿ ತಮ್ಮ ಮೇಲೆ ಆದ್ದರಿಂದ ನೀವು ಕಾನೂನುಗಳನ್ನು ಗೌರವಿಸಿ ಸಹಕರಿಸುತ್ತೀರೆಂಬ ನಂಬಿಕೆಯಿದೆ ಎಂದ ಅವರು ಉತ್ತಮ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಒಮ್ಮೆ ಉಪಯೋಗಿಸಿದ ಪ್ಲಾಸ್ಟಿಕ್ ಚೀಲಗಳನ್ನು ಮತ್ತೆ ಬಳಸುವುದಿಲ್ಲ. ತ್ಯಾಜ್ಯಗಳನ್ನು ಪುರಸಭೆಯ ತ್ಯಾಜ್ಯ ಸಂಗ್ರಾಹಣಾ ವಾಹನಗಳಿಗೆ ನೀಡುತ್ತೇವೆ. ದಿನನಿತ್ಯ ಬಳಕೆಯಲ್ಲಿ ಪ್ಲಾಸಿಕ್ ಕೈ ಚೀಲಗಳನ್ನು ಬಳಸದೆ ಪರಿಸರ ಸ್ನೇಹಿ ಚೀಲಗಳನ್ನು ಬಳಸುತ್ತೇವೆ ಎಂಬ ಪ್ರತಿಜ್ಞೆಯನ್ನು ಬೋಧಿಸಿದರು. ಪುರಸಭೆಯ ಪರಿಸರ ಅಭಿಯಂತರೆ ಶಿಲ್ಪಾ ಹಾಗೂ ಪೌರ ಕಾರ್ಮಿಕರು ಈ ಸಂದರ್ಭದಲ್ಲಿದ್ದರು.

 

Related posts

Leave a Reply

Your email address will not be published. Required fields are marked *