
ಪೆಟ್ರೋಲ್ ಡೀಸಲ್ ಮತ್ತು ಗ್ಯಾಸ್ ಬೆಲೆ ಏರಿಕೆಯನ್ನು ವಿರೋಧಿಸಿ ಎಐವೈಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಪೊಸ್ಸೋಟ್ ಪೆಟ್ರೋಲ್ ಪಂಪ್ ಎದುರು ಪ್ರತಿಭಟನೆ ನಡೆಯಿತು. ಎಐವೈಎಫ್ ಮಂಜೇಶ್ವರ ಮಂಡಲ ಅಧ್ಯಕ್ಷ ದಯಾಕರ ಮಾಡ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನೆಯ ಎಐವೈಎಫ್ ಜಿಲ್ಲಾ ಅಧ್ಯಕ್ಷ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಎಐಟಿಯುಸಿ ನೇತಾರರಾದ ಮುಸ್ತಫಾ ಕಡಂಬಾರ್, ರಾಮದಾಸ್ ಕಡಂಬಾರ್, ಎಐವೈಎಫ್ ನೇತಾರರಾದ ಹರೀಶ್ ಕೆ.ಆರ್, ಮನು ಪುತ್ತಿಗೆ, ಜಯಪ್ರಕಾಶ್.ಕುಂಬಳೆ ಮೊದಲಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ರಾಜ ದುರ್ಗಿಪಲ್ಲ, ಶನೀಶ್ ಮಂಜೇಶ್ವರ, ಫಾರೂಕ್ ಉಪ್ಪಳ, ದೀಪಕ್ ಸೂರಿಬೈಲ್, ಕಿಶೋರ್ ಕುಳೂರ್, ಉಮೇಶ್ ಕುಚ್ಚಿಕ್ಕಾಡ್, ಧನ್ರಾಜ್, ರವಿ ಮೊಂತೆರೋ, ಮಹಮೂದ್ ಮೊದಲಾದವರು ನೇತೃತ್ವ ನೀಡಿದರು.