Header Ads
Breaking News

ತೊಕ್ಕೊಟ್ಟಿನಲ್ಲಿ ಬಿಜೆಪಿ ಚುನಾವಣಾ ಕಾರ್ಯಲಯ ಉದ್ಘಾಟನೆ

ಜಿಎಸ್‌ಟಿ ಜಾರಿಗೆ ಬರುವ ತನಕ ಹೋಟೆಲ್ ಉದ್ಯಮಿಗಳು ಬೇರೆ ಬೇರೆ ರೂಪದಲ್ಲಿ ತೆರಿಗೆ ಪಾವತಿಸುವ ಅನಿವಾರ್ಯತೆ ಇತ್ತು. ಆದರೆ ಏಕರೂಪದ ಜಿಎಸ್‌ಟಿ ಜಾರಿಗೆ ಬಂದ ನಂತರ ಹೋಟೆಲ್ ಉದ್ಯಮಿಗಳು ಕೇವಲ ೫ಶೇ. ಜಿಎಸ್‌ಟಿ ಪಾವತಿಸುವ ಮೂಲಕ ಹೋಟೆಲ್ ಉದ್ಯಮಿಗಳಿಗೆ ಬಹಳಷ್ಟು ಸಹಾಯವಾಗಿದೆ ಎಂದು ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದು ನಿಜಕ್ಕೂ ಸಂತಸದ ವಿಷಯ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ತೊಕ್ಕೊಟ್ಟು ಕಾಪಿಕಾಡಿನ ಖಾಸಗಿ ಕಟ್ಟಡದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ತೆರೆಯಲಾದ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ನೀರವ್ ಮೋದಿ ಬಂಧನ, ಪಾಕಿಸ್ತಾನದ ಸೈನ್ಯದಿಂದ ವೀರ ಯೋಧ ಅಭಿನಂದನ್ ಕರೆತರುವಂತಹ ದೇಶ ಮೆಚ್ಚುವ ಕಾರ್ಯ ದೇಶದ ಪ್ರಧಾನಿಯಿಂದ ಆಗಿದೆ. ಇದೆಲ್ಲವನ್ನು ಜಿಲ್ಲೆಯ ಜನ ಮನಗಂಡು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಚುನಾವಣಾ ಉಸ್ತುವಾರಿ ಬೂಡಿಯಾರ್ ರಾಧಾಕೃಷ್ಣ ರೈ, ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *