Header Ads
Header Ads
Breaking News

ತೊಕ್ಕೊಟ್ಟು:ರಾಜ್ಯದೈಹಿಕ ಶಿಕ್ಷಣ ಶಿಕ್ಷಕರ ಸಂಘ ವತಿಯಿಂದ ದೈಹಿಕ ಶಿಕ್ಷಕರಿಗೆ ಅಭಿನಂದನೆ

ರಾಜ್ಯದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ವಲಯ ವತಿಯಿಂದಉತ್ತಮ ಶಿಕ್ಷಕ ಪ್ರಶಸ್ತಿ ಪಡೆದದೈಹಿಕ ಶಿಕ್ಷಕರಿಗೆ ಅಭಿನಂದನೆ ಹಾಗೂ ಕಾರ್ಯಾಗಾರ ತೊಕ್ಕೊಟ್ಟು ಸಂತ ಸೆಬಾಸ್ತಿಯನ್ ಶಾಲಾ ಸಭಾಂಗಣದಲ್ಲಿ ನಡೆಯಿತು.ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್‌ನ ಸಹಾಯಕಧರ್ಮಗುರು ಫಾ.ಲೈಝಿಲ್‌ಡಿಸೋಜ ದ್ವೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಾಲಾ ಮಕ್ಕಳಲ್ಲಿ ದೈಹಿಕ ಸಧೃಡತೆಯಿದ್ದಲ್ಲಿ ಮಾನಸಿಕ ಸಧೃಡತೆಕಾಪಾಡಲು ಸಾಧ್ಯ, ಈ ಕೆಲಸವನ್ನುದೈಹಿಕ ಶಿಕ್ಷಕರು ಮಾಡುತ್ತಾ ಬಂದಿದ್ದಾರೆ.

ಉಳ್ಳಾಲ ಭಾಗದಲ್ಲಿಅಯೋಜಿಸುವ ಕೀಡಾಕೂಟಗಳು ಯಶಸ್ವೀಯಾಗಿ ನಡೆಯುತ್ತಿದ್ದುದೈಹಿಕ ಶಿಕ್ಷಕರ ಒಗ್ಗಟ್ಟಿನ ಕೆಲಸದಿಂದ ಸಾಧ್ಯವಾಗಿದೆ.ಇಂತಹಒಗ್ಗಟ್ಟುಕಾಣುವ ಮಕ್ಕಳಿಗೂ ಮಾರ್ಗದರ್ಶನವಾಗಲಿದೆಎಂದು ಹೇಳಿದರು.ಕಾರ್ಯಕ್ರಮದಲ್ಲಿಉತ್ತಮ ಶಿಕ್ಷಕ ಪ್ರಶಸ್ತಿ ಪಡೆದದೈಹಿಕ ಶಿಕ್ಷಣಾಧಿಕಾರಿ ಲಿಲ್ಲಿ ಪಾಯಸ್ ಹಾಗೂ ದೈಹಿಕ ಶಿಕ್ಷಕ ಕೆ.ಎಚ್.ನಾಯಕ್‌ ಅವರನ್ನುಅಭಿನಂದಿಸಲಾಯಿತು.ದಕ್ಷಿಣ ವಲಯ ಶಿಕ್ಷಣ ಸಮನ್ವಯಾಧಿಕಾರಿಡಾ.ಪ್ರಶಾಂತ್‌ಕುಮಾರ್‌ಕೆ.ಎಸ್., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್, ಸಂತ ಸೆಬಾಸ್ತಿಯನ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತ ನತಾಲಿಯಾ, ಪಿ.ಡಿ.ಶೆಟ್ಟಿ, ತಾರಾನಾಥರೈ, ಪ್ರತೀಕ್, ಲೋಕನಾಥರೈ, ಪ್ರೀತಂ, ಉರ್ಬನ್ ಮಸ್ಕರೇನಸ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply