Header Ads
Header Ads
Header Ads
Breaking News

ತೊಕ್ಕೊಟ್ಟುವಿನಲ್ಲಿ ಜನ ಏಕತೆ, ಜನ ಅಧಿಕಾರ್ ಆಂದೋಲನ ಉಳ್ಳಾಲ ವಲಯ ಸಮಿತಿ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು.

ಉಳ್ಳಾಲ: ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರ ಹಕ್ಕುಗಳ ತಡೆ, ಅಲ್ಪಸಂಖ್ಯಾತರ ಮೇಲೆ ದಾಳಿ, ದಲಿತರ ಮೇಲೆ ದಾಳಿ, ದೌರ್ಜನ್ಯ ಅತ್ಯಾಚಾರಗಳು ಹೆಚ್ಚಾಗಿವೆ ಎಂದು ಸಿಪಿ‌ಎಂ ಉಳ್ಳಾಲ ವಲಯ ಕಾರ್‍ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದ್ದಾರೆ.

ಅವರು ಜನ ಏಕತೆ, ಜನ ಅಧಿಕಾರ್ ಆಂದೋಲನ ಉಳ್ಳಾಲ ವಲಯ ಸಮಿತಿ ವತಿಯಿಂದ ದೇಶದ ಜನತೆಯ ಏಕತೆ ಮತ್ತು ಹಕ್ಕುಗಳ ಮೇಲಿನ ದಾಳಿಗೆದುರಾಗಿ ಸ್ವಾತಂತ್ರ್ಯ ಜ್ಯೋತಿಯ ದ್ಯೋತಕವಾಗಿ ತೊಕ್ಕೊಟ್ಟುವಿನಲ್ಲಿ ಆಯೋಜಿಸಲಾದ ಪಂಜಿನ ಮೆರವಣಿಗೆ ಮತ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಾದ್ಯಂತ ಜನರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ರೈತರಿಗೆ ಮಾರಕವಾಗುವ ನೀತಿಗಳ ಜಾರಿಯಾಗುತ್ತಿದೆ. ಭಯೋತ್ಪಾದನೆ ನಿಲ್ಲಿಸುತ್ತೇವೆ ಅಂದವರು ದಿನಕ್ಕೊಂದರಂತೆ ಸೈನಿಕರ ಸಾವಿಗೆ ಕಾರಣರಾಗುತ್ತಿದ್ದಾರೆ. ಯುವಸಮುದಾಯ ಕೆಲಸವಿಲ್ಲದೆ ಅಲೆದಾಡುತ್ತಿದ್ದಾರೆ. ಅವೈಜ್ಞಾನಿಕ ನೀತಿಗಳ ವಿರುದ್ಧ ದನಿ ಎತ್ತುವ ಸಾಹಿತಿಗಳು, ಎಡಪಂಥೀಯರ ಮೇಲೆ ನಿರಂತರ ದೌರ್ಜನ್ಯಗಳು ಕೊಲೆ ನಡೆಯುತ್ತಿದೆ. ಇಂತಹ ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಕಾರ್ಮಿಕ, ವಿದ್ಯಾರ್ಥಿ, ಕಾರ್ಮಿಕ, ದಲಿತ, ಸಾಹಿತಿಗಳ , ರೈತ ಸಂಘಟನೆಗಳು ಒಟ್ಟಾಗಿ ಸೇರಿ ಒಟ್ಟು ದೇಶದ ೧೦೦ ಸಂಘಟನೆಗಳು ಹೋರಾಟ ನಡೆಸಲಿದೆ ಎಂದರು.

 

ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿದ ಸಿಪಿ‌ಎಂ ನ ಜಿಲ್ಲಾ ಕಾರ್‍ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ಮಾತನಾಡಿ ಮೋದಿ ಸರಕಾರ ಏಕಾ‌ಏಕಿ ತಯಾರಿ ನಡೆಸದೆ ನೋಟು ಮಾನ್ಯತೆ ರದ್ದುಗೊಳಿಸಿ ಶ್ರೀಮಂತರ ಕಪ್ಪು ಹಣವನ್ನು ಬಿಳಿ ಮಾಡಿದರು. ಈ ನೀತಿಯನ್ನು ಸ್ವಪಕ್ಷದ ಮುಖಂಡರೇ ಅವೈಜ್ಞಾನಿಕ ಎಂದು ಆರೋಪಿಸುತ್ತಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ದೇಶವನ್ನು ಒಡೆಯುವ ಕಾರ್ಯಕ್ಕೆ ಮುಂದಾಗಿರುವ ಕೇಂದ್ರ ಸರಕಾರ ದೇಶದಾದ್ಯಂತ ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಸದ ನಳಿನ್ ಕಟೀಲ್ ಅವರ ಭಾಷಣದಿಂದ ಕುಂಪಲದ ಅಂಕಿತ್ ಪೂಜಾರಿ ಅನ್ನುವ ಎಳೆಯ ಹುಡುಗ ಭಾಷಣದ ಪ್ರೇರಣೆಯಿಂದ ಕೊಲೆಗಡುಕನಾದ. ಭುವಿತ್ ಶೆಟ್ಟಿ ಎಂಬ ಬಜರಂಗದಳದ ಕಾರ್‍ಯಕರ್ತನ ತಲೆಗೆ ವಿಷ ತುಂಬಿಸಿ ಅಮಾಯಕ ಹರೀಶ್ ಕುಮಾರ್ ನನ್ನು ಕೊಲೆ ನಡೆಸಿದರು. ಜನಪರವಾಗಿ ಹೋರಾಟ ನಡೆಸದವರು ಮುಸ್ಲಿಂ, ಹಿಂದುಗಳ ಹೆಸರಿನಲ್ಲಿ ಹೋರಾಟ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಸಿಪಿ‌ಎಂ ಜಿಲ್ಲಾ ಸದಸ್ಯ ಜಯಂತ್ ನಾಯ್ಕ್, ಪದ್ಮಾವತಿ ಯಸ್ ಶೆಟ್ಟಿ ಉಳ್ಳಾಲ ಲೋಕಲ್ ಸಮಿತಿ ಸದಸ್ಯೆ. ಡಿವೈ‌ಎಫ್ ಐ ಅಧ್ಯಕ್ಷ ಜೀವನ್ ರಾಜ್ ಕುತ್ತಾರ್, ಎಸ್ ಎಫ್ ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಕಟ್ಟಡ ಕಾರ್ಮಿಕ ಉಲ್ಳಾಲ ವಲಯ ಅಧ್ಯಕ್ಷ ಜನಾರ್ದನ ಕುತ್ತಾರ್ ಉಪಸ್ಥಿತರಿದ್ದರು. ಈ ವೇಳೆ ತೊಕ್ಕೊಟ್ಟು ಸಿಪಿ‌ಎಂ ಕಚೇರಿಯಿಂದ ಬಸ್ಸು ನಿಲ್ದಾಣದವರೆಗೆ ಪಂಜಿನ ಮೆರವಣಿಗೆ ನಡೆಯಿತು.

Related posts

Leave a Reply