Header Ads
Header Ads
Breaking News

ತೊಕ್ಕೊಟ್ಟುವಿನಲ್ಲಿ ಭೀಕರ ರಸ್ತೆ ಅಪಘಾತ

ತೊಕ್ಕೊಟ್ಟು ಸಮೀಪ ನಡೆದ ರಸ್ತೆ ಅಪಘಾತಕ್ಕೆ ಕೇರಳ ಮೂಲದ ಓರ್ವ ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ. ಮೃತರನ್ನು ಅನೂಪ್ ಎಂದು ಗುರುತಿಸಲಾಗಿದೆ. ಎರ್ನಾಕುಳಂ ನಿವಾಸಿ ಅನೂಪ್ (35) ಮೃತಪಟ್ಟವರು. ಇವರ ಜತೆಗಿದ್ದ ಸಹೋದ್ಯೋಗಿಗಳಾದ ಬಿಲಾಲ್, ಜಾರ್ಜ್, ಆನಂದ್ ಮತ್ತು ಅನೂಪ್ ಎಂಬವರು ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದ ಟೆಕ್ನೀಷಿಯನ್ ಆಗಿ ಅನೂಪ್ ಕಳೆದ ಎರಡು ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ತಡರಾತ್ರಿ ಕೇರಳದ ಊರಿಗೆ ದೂರದಿಂದ ಬಂದ ಸಹೋದರನನ್ನು ಭೇಟಿಯಾಗಲೆಂದು ಒಂದೇ ರೂಮಿನಲ್ಲಿದ್ದ ಐವರು ಸಹದ್ಯೋಗಿಗಳು ಕಾರಿನಲ್ಲಿ ತೆರಳಿದ್ದರು. ಅಲ್ಲಿಂದ ದೇರಳಕಟ್ಟೆ ಕಡೆಗೆ ವಾಪಸ್ಸಾಗುತ್ತಿದ್ದ ಸಂದರ್ಭ ತೊಕ್ಕೊಟ್ಟುವಿನಲ್ಲಿ ಹಠಾತ್ ಬ್ರೇಕ್ ಒತ್ತಿದ ಪರಿಣಾಮ ಕಾರು ಎರಡು ಪಲ್ಟಿಯಾಗಿತ್ತು. ಅನೂಪ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಉಳಿದವರನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

Related posts

Leave a Reply