Header Ads
Header Ads
Breaking News

ತೊಕ್ಕೊಟ್ಟು ಓವರ್‌ಬ್ರಿಡ್ಜ್ ಕೊರಗಜ್ಜ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಚಿವ ಯು.ಟಿ ಖಾದರ್ ಅವರಿಂದ ಪೂಜೆ

ಉಳ್ಳಾಲ,: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ. ಖಾದರ್ ಅವರ ಚುನಾವಣಾ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಮತ್ತು ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಜಯಿಸಲಿ ಎಂದು ತೊಕ್ಕೊಟ್ಟು ಓವರ್‌ಬ್ರಿಡ್ ಕೊರಗಜ್ಜ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಶ್ರೀ ಕ್ಷೇತ್ರದ ಗೌರವ ಸಲಹೆಗಾರ ಗೌರವ ಸಲಹೆಗಾರ ರೋಹಿತ್ ಉಳ್ಳಾಲ್ ಮಾತನಾಡಿ ಕೊರಗಜ್ಜ ಸೇವಾ ಸಮಿತಿಯ ಆಶ್ರಯದ ಈ ಸನ್ನಿಽಯ ಅಭಿವೃದ್ಧಿಯಲ್ಲಿ ಯು.ಟಿ.ಖಾದರ್ ಅವರ ಸಹಕಾರ ಮಹತ್ವದ್ದು, ಕಳೆದ ಬಾರಿ ಚಿಉನಾವಣಾ ಸಂದರ್ಭದಲ್ಲಿ ವಿಸೇಷ ಪ್ರಾರ್ಥನೆ ಸಲ್ಲಿಸಿದ್ದು, ಸಚಿವರಾಗಿ ಆಯ್ಕೆಯಯಾಗಲಿ ಎಂದು ವಿಶೇಷ ಪ್ರಾರ್ಥನೆ ನಡೆಸಿದ್ದವು ಇದೀಗ ಚುನಾವಣೆ ಹಿನ್ನಲೆಯಲ್ಲಿ ಖಾದರ್ ಅವರ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಎಂದ ಅವರು ಈ ಕ್ಷೇತ್ರಕ್ಕೆ ಸರ್ವಧರ್ಮದವರು ಬಂದು ಸೇವೆ ನೀಡುತ್ತಿದ್ದು, ಎಲ್ಲರಿಗೂ ಈ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ ಉಳ್ಳಾಲ್, ರವೀಂದ್ರ ಗುರಿಕಾರ, ಅಧ್ಯಕ್ಷ ಮೋಹನ್‌ದಾಸ್ ಕಾಪಿಕಾಡ್, ರವಿ.ಎಸ್. ಗಾಂಧಿನಗರ, ಮುರಳಿ ಮೋಹನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಆರೋಪ್ ಉಳ್ಳಾಲ