Header Ads
Header Ads
Breaking News

ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿ ವಿಳಂಬಕ್ಕೆ ಆಕ್ರೋಶ

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಅನ್ನು ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕಟೀಲ್ ಜೊತೆಗೆ ಡಿವೈಎಫ್ ಐ ಕಾರ್‍ಯಕರ್ತರು ಸೇರಿಕೊಂಡು ಉದ್ಘಾಟಿಸಿದರು ! ಕೇಳುವಾಗ ಇದೊಂದು ಅಚ್ಚರಿಯೇ ಹೌದು. ಆದರೆ ವಾಸ್ತವವಾಗಿ ಕಾಮಗಾರಿ ಮುಗಿಸುವ ದಿನಾಂಕ ನೀಡಿರುವ ಸಂಸದರು ತಪ್ಪಿದ್ದಾರೆ ಎಂದು ಆರೋಪಿಸಿ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಸೇತುವೆಯನ್ನು ಮೂವರ ಮುಖವಾಡವನ್ನು ಧರಿಸಿ ಅಣುಕು ಉದ್ಘಾಟನೆ ನಡೆಸುವ ಮೂಲಕ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಡಿವೈ ಎಫ್ ಐ ಜಿಲ್ಲಾ ಕಾರ್‍ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ, ತಲಪಾಡಿಯಿಂದ ಕುಂದಾಪುರದವರೆಗೆ ಹೆದ್ದಾರಿ ದುರಸ್ತಿಗೊಳಿಸಲು ಅಸಾಧ್ಯವಾಗಿದೆ. ನ,.1, ಡಿ.30 ಎಂದು ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಅನ್ನುತ್ತಾ ಸುಳ್ಳು ಹೇಳಿಕೆಗಳನ್ನೇ ನೀಡುತ್ತಲೇ ಬಂದಿದ್ದಾರೆ. ಫೆ.೨೮ ರ ಒಳಗೆ ಸಂಚಾರ ಮುಕ್ತ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪು ಹಾದಿಗೆ ಕೊಂಡೊಯುವ ಪ್ರಯತ್ನವಾಗಿದೆ. ಜನರಲ್ಲಿನ ಆಕ್ರೋಶ ಕಡಿಮೆ ಗೊಳಿಸುವ ಸಲುವಾಗಿ ಸುಳ್ಳು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈವರೆಗೂ ಮುಕ್ತಾಯ ಮಾಡಲು ಸಾಧ್ಯವಾಗಿಲ್ಲ. ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಹಂತಹಂತವಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಫಾರುಕ್ ಉಳ್ಳಾಲ್ ಮಾತನಾಡಿ , ಬಿಜೆಪಿ ಪಕ್ಷದ ಜನವಿರೋಧಿ ಕೃತ್ಯಗಳನ್ನು ಜನರಿಗೆ ತಿಳಿಸುವಂತಹ ಬಹಿರಂಗ ಪ್ರದರ್ಶನವಾಗಿದೆ. ಕಟೀಲ್ ಗೆ ಇಚ್ಛಾಶಕ್ತಿ ಇದ್ದಲ್ಲಿ ಕಾಮಗಾರಿ ಮುಗಿಯುತಿತ್ತು. ವಾಸ್ತವ ನವಯುಗ ಕಂಪೆನಿಯಿಂದ ಸಚಿವ ನಿತಿನ್ ಗಡ್ಕರಿ, ಸಂಸದ ಕಟೀಲ್ ಪಡೆದ ಲಂಚದ ಆಮಿಷದಿಂದ ಕಾಮಗಾರಿ ವಿಳಂಬವಾಗಿದೆ. ಅಲ್ಲದೆ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಕಾಲಿಡದ ರೀತಿಯಲ್ಲಿ ಪ್ರತಿಬಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಈ ಸಂದರ್ಭ ಸಿಪಿಎಂ ಉಳ್ಳಾಲ ವಲಯ ಕಾರ್‍ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಜಿಲ್ಲಾ ಉಪಾಧ್ಯಕ್ಷ ನವೀನ್ ಕೊಂಚಾಡಿ , ಜಿಲ್ಲಾ ಜತೆ ಕಾರ್‍ಯದರ್ಶಿ ನಿತಿನ್ ಕುತ್ತಾರ್, , ಉಳ್ಳಾಲ ವಲಯ ಕಾರ್‍ಯದರ್ಶಿ ರಝಾಕ್ ಮೊಂಟೆಪದವು, ಜಯಂತ್ ನಾಯ್ಕ್ , ಪದ್ಮಾವತಿ. ಯಸ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಗಡಿನಾಡು ರಕ್ಷಣಾ ವೇದಿಕೆ ಸಿದ್ದೀಖ್ ತಲಪಾಡಿ, ರಫೀಕ್ ಹರೇಕಳ, ಇಬ್ರಾಹಿಂ ಮದಕ, ಮಹಾಬಲ ಟಿ. ದೆಪ್ಪೆಲಿಮಾರ್, ಹರೇಕಳ ಗ್ರಾ.ಪಂ ಸದಸ್ಯ ಅಶ್ರಫ್ ಹರೇಕಳ, ಹನೀಫ್ ಹರೇಕಳ, ಮಿಥುನ್ ಕುತ್ತಾರ್ ಉಪಸ್ಥಿತರಿದ್ದರು.
ವರದಿ: ಆರೀಪ್ ಉಳ್ಳಾಲ

Related posts

Leave a Reply