Header Ads
Breaking News

ತೊಟತ್ತಾಡಿಯ ಕುಂಟಾಡಿಯಲ್ಲಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಚೆಕ್ ಡ್ಯಾಮ್ ನಿರ್ಮಾಣ

ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ಚಾರ್ಮಾಡಿ, ಕಕ್ಕಿಂಜೆ ಹಾಗೂ ರಾಷ್ಟ್ರೀಯ ಸೇವಾ ದಳದ ಕೆಲವು ಸ್ಥಳೀಯ ಆಸಕ್ತ ವಿದ್ಯಾರ್ಥಿಗಳ ಸಹಯೋಗದಲ್ಲಿ ತೊಟತ್ತಾಡಿಯ ಕುಂಟಾಡಿ ಎಂಬಲ್ಲಿ ಚೆಕ್ ಡ್ಯಾಮ್ ಒಂದನ್ನು ಕಟ್ಟಲಾಯಿತು ಇದರಿಂದ ಶ್ರೀ ಆಂಟಿನಿ, ಶ್ರೀ ಪ್ರಾನ್ಸಿಸ್ ಸೇರಿದಂತೆ ಸುಮಾರು ಆರು ಕುಟುಂಬಗಳ 24 ಜನರಿಗೆ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ ಬಹಳಷ್ಟು ಸಹಕಾರಿಯಾಗಲಿದೆ.ಭೂಮಿಯ ಅಂತರ್ಜಲವನ್ನು ಹೆಚ್ಚಿಸುವ ಸಲುವಾಗಿ ಹಾಗೂ ಕೃಷಿಗೆ ನೀರನ್ನು ಒದಗಿಸುವ ಸಲುವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಇಂತಹ ಹಲವಾರು ಕೆಲಸಗಳನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ ಯ ಅಧ್ಯಕ್ಷರಾದ ರೊ.ಬಿ.ಕೆ.ಧನಂಜಯ ರಾವ್ ,ಕಾರ್ಯದರ್ಶಿ ರೊ.ಶ್ರೀಧರ ಕೆವಿ.ರೊ ಶರತ್ ಕುಮಾರ್ ಟಿ.ಕೆ.ರೊ ವೆಂಕಟೇಶ್ವರ ಭಟ್ ಕಜೆ, ರೊ.ಪ್ರಕಾಶ ನಾರಾಯಣ್ ಹಾಗೂ ರೊ.ಜಗದೀಶ್ ಪ್ರಸಾದ್ ಹಾಗೂ ರೊ ಕೆ.ಪಿ.ಪ್ರಸಾದ್ ಅವರ ಸಹಕಾರದಲ್ಲಿ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಶ್ರೀ ಓಬಯ್ಯ ಗೌಡ ಕಾರ್ಯದರ್ಶಿ ರೊ.ಜಯಾನಂದ ಡಿ. ಪ್ರಾನ್ಸಿಸ್,ಶ್ರೀ ಲೋಕೇಶ್ ಶೆಟ್ಟಿ ಹಾಗೂ ಸುಮಾರು 20 ಜನ ಯುವಕರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *