Header Ads
Header Ads
Breaking News

ತೊಡಿಕಾನ: ಗ್ರಾಮ ಮಟ್ಟದ ಕ್ರೀಡೋತ್ಸವದ ಸಮಾರೋಪ ಸಮಾರಂಭ

ಸುಳ್ಯ: ತಾಲೂಕು ಗೌಡರ ಯುವ ಸೇವಾ ಸಂಘದ ವ್ಯಾಪ್ತಿಯ 47 ಗ್ರಾಮಗಳ 7 ಜನರ ಮುಕ್ತ ಪುರಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಮತ್ತು ಗ್ರಾಮ ಮಟ್ಟದ ಕ್ರೀಡೋತ್ಸವದ ಸಮಾರೋಪ ಸಮಾರಂಭವು ಗೌಡರ ಯುವ ಸೇವಾ ಸಂಘ ಸುಳ್ಯ, ಸುಳ್ಯ ತಾಲೂಕು ತೊಡಿಕಾನ ಗ್ರಾಮ ಸಮಿತಿ ವತಿಯಿಂದ ನಡೆಯಿತು.

ಸುಳ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ಗೌಡರ ಯುವಸೇವಾ ಸಂಘ ಸುಳ್ಯ ಇದರ ವಲಯ ಅಧ್ಯಕ್ಷ ಎನ್.ಎ ಜ್ಞಾನೇಶ್ ಗೌಡರವರು ಮಾತನಾಡಿ, ಹಿರಿಯರನ್ನು ನಾವು ಸಮಾಜದಲ್ಲಿ ಗೌರವಿಸಿದರೆ ನಮಗೆ ಇನ್ನಷ್ಟು ಶಕ್ತಿ ಜಾಸ್ತಿ ಬರುತ್ತದೆ. ಹಿರಿಯರು ಸಮಾಜಕ್ಕೆ ಆದರ್ಶ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ ಜಯರಾಮ್ ಗೌಡ, ಗೌಡರ ಯುವ ಸೇವಾ ಸಮಿತಿ ತೊಡಿಕಾನ ಗ್ರಾಮ ಸಮಿತಿ ಅಧ್ಯಕ್ಷ ರಮಾನಂದ ಗೌಡ ಬಾಳಕಜೆ, ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾ ಮೇದಪ್ಪ, ಗೌಡರ ಯುವ ಸೇವಾ ಸಂಘದ ಸುಳ್ಯದ ತರುಣ ಘಟಕದ ಅಧ್ಯಕ್ಷ ಶ್ರೀಕಾಂತ್  ಗೌಡ ಮಾವಿನಕಟ್ಟೆ, ತೇಜಪ್ರಸಾದ್ ಅಮಚೂರು,  ತೀರ್ಥರಾಮ ಅಡ್ಕಬಳೆ, ತೊಡಿಕಾನ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಬೋಜಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related posts

Leave a Reply