Header Ads
Header Ads
Breaking News

ತೋಟ ಬೆಂಗ್ರೆ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಸ್ವಯಂ ಸೇವಾ ಸಂಘ ಬೆಂಗ್ರೆ ವತಿಯಿಂದ ವಿತರಣೆ


ಸ್ವಯಂ ಸೇವಾ ಸಂಘ ಬೆಂಗ್ರೆ ವತಿಯಿಂದ ತೋಟ ಬೆಂಗ್ರೆಯ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಿಸುವ ಕಾರ್ಯಕ್ರಮ ನಡೆಯಿತು.
ಬೆಂಗ್ರೆಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವು ಸಮಾಜ ಸೇವಕರಾದ ಲತೀಶ್ ಪುತ್ರನ್ ಹಾಗೂ ಮಹೇಶ್‌ರವರ ಮುಂದಾಳತ್ವದಲ್ಲಿ ನೆರವೇರಿತು.
ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಮತ್ತು ಪಿಯುಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಥಮ ೧೫,೦೦೦ ರೂ. ಹಾಗೂ ದ್ವಿತೀಯ ೧೦,೦೦೦ ಚೆಕ್ಕನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾದ ಯತೀಶ್ ಬೆಂಗ್ರೆ ಮಾತನಾಡಿ, ಪ್ರತೀ ವರುಷ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸ್ಕಾಲರ್‌ಶಿಪ್ ನೀಡಲಾಗುತ್ತಿತ್ತು, ಅಂತೆಯೇ ಈ ವರುಷವೂ ಸ್ಕಾಲರ್‌ಶಿಪ್‌ಗಳನ್ನು ನೀಡಲಾಯಿತು ಎಂದರು. ಈ ಸಂದರ್ಭ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹೇಮಚಂದ್ರ ಡಿ. ಕೆ., ತೇಜ್‌ಪಾಲ್ ಸುವರ್ಣ, ಅಬ್ದುಲ್ ಸಮದ್, ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ಉಪಸ್ಥಿತರಿದ್ದರು.

Related posts

Leave a Reply