
ತೋಡಿನೊಳಗೆ ಬಿದ್ದಿರುವ ಅಪರಿಚಿತ ವೃದ್ಧರನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ಪಾದಚಾರಿ ವೃದ್ಧರೊರ್ವರು ಬ್ರಹ್ಮಗಿರಿ ಕಾಲ್ಮೆಂಟ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ರಸ್ತೆ ಪಕ್ಕದ ಆಳವಾದ ತೋಡಿಗೆ ಬಿದ್ದಿರುವ ಘಟನೆ ನಿನ್ನೆ ರಾತ್ರಿ ಸಮಯ ನಡೆದಿದೆ. ವೃದ್ಧರು ಬಿದ್ದಿರುವ ವಿಯವು ಯಾರ ಗಮನಕ್ಕೆ ಬಾರದರಿಂದ ರಾತ್ರಿ ಸಮಯವನ್ನು ವೃದ್ಧರು ಸೊಳ್ಳೆ, ವಿ?ಜಂತುಗಳ ಸಂಚಾರ ಇರುವ ತೋಡಿನಲ್ಲಿ ಕಳೆದಿದ್ದಾರೆ. ಇಂದು ನಸುಕಿನ ಜಾವ ನರಳಾಟದ ಧ್ವನಿ ಕೇಳಿದ ಸನಿಹದ ಮನೆಯವರು, ಧ್ವನಿ ಬರುವ ಸ್ಥಳದತ್ತ ಹುಡಾಕಾಟ ನಡೆಸಿದಾಗ ಅಪರಿಚಿತ ವೃದ್ಧರೊರ್ವರು ಚಪ್ಪಡಿ ಹಾಸಿದ ತೋಡಿನೊಳಗೆ ಅಪಾಯದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದ್ದಾರೆ. ಅವರು ತಕ್ಷಣ ವೃದ್ಧರ ರಕ್ಷಣೆ ಮಾಡಲು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ಸುದ್ಧಿ ಮುಟ್ಟಿಸಿದ್ದಾರೆ. ಸುದ್ಧಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿ ಬಂದಿರುವ ಸಮಾಜಸೇವಕ ವಿಶು ಶೆಟ್ಟಿ ಅವರು, ಅಂಬಲಪಾಡಿಯ ಕೃ? ಅವರ ಸಹಾಯ ಪಡೆದು, ತೋಡಿಗೆ ಇಳಿದು ಪ್ರಯಾಸಪಟ್ಟು ವೃದ್ಧರನ್ನು ಮೇಲಕ್ಕೆತ್ತಿದ್ದಾರೆ. ವೃದ್ಧರ ಕಾಲು ದೇಹದ ಕೆಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ವಿಷ್ಜಂತುಗಳ ಸಂಚಾರ ಇರುವ ತೋಡಿನಲ್ಲಿ ವೃದ್ಧರು ಯಾವೊಂದು ಅಪಾಯ ಇಲ್ಲದೆ, ವಿಶು ಶೆಟ್ಟಿ ಅವರ ತಕ್ಷಣದ ಸಮಯಪ್ರಜ್ಞೆಯಿಂದ ಪಾರಾಗಿದ್ದಾರೆ. ವೃದ್ಧರು ಹೆಸರು ವಾಸು ಪೂಜಾರಿ ತೆಂಕ ಎರ್ಮಾಳು ಎಂದು ಅಸ್ವಷ್ಟ ವಿಳಾಸ ನೀಡಿದ್ದಾರೆ.