Header Ads
Breaking News

ತ್ಯಾಜ್ಯ ವಿಲೇವಾರಿಯಲ್ಲಿ ಗೊಂದಲ : ಕಾರ್ಕಳದ ಪುರಸಭೆಯ ಅಧಿಕಾರಿಯಿಂದ ಕಠಿಣ ಕ್ರಮದ ಎಚ್ಚರಿಕೆ

ಕಾರ್ಕಳ ಪುರಸಭೆ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ಒಣಕಸವನ್ನು ಶುಕ್ರವಾರ ಮಾತ್ರ ವಿಲೇವಾರಿ ಮಾಡಬೇಕೆಂದು ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಆದೇಶವನ್ನು ನೀಡಿದ್ದಾರೆ. 

ಪುರಸಭೆಯ ಮುಖ್ಯಾಧಿಕಾರಿಯವರು ಕೊಟ್ಟ ಆದೇಶದ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳು ತಮ್ಮ ಮನೇಲಿ ಶೇಖರಣೆಯಾದ ಕಸವನ್ನು ಗಂಟುಕಟ್ಟಿ ರಸ್ತೆ ಬದಿಯಲ್ಲಿ ಹಾಕಲು ಆರಂಭಿಸಿದ್ದಾರೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಒಣ ಕಸವನ್ನು ರಸ್ತೆಬದಿ ಹಾಕಿದ್ದು ಕಂಡುಬಂದರೆ ಅವರ ಮೇಲೆ ಅತ್ಯಂತ ಕಠಿಣ ಕ್ರಮ ಕ್ರಮವನ್ನು ಪುರಸಭೆಯಿಂದ ತೆಗೆದುಕೊಳ್ಳುತ್ತೇವೆ. ಪರಿಸರ ರಕ್ಷಣೆ ನಮ್ಮ ಮುಖ್ಯ ಆದ್ಯತೆಯಾಗಿದೆ. ಆದ್ದರಿಂದ ಯಾರು ಒಣ ಕಸವನ್ನು ರಸ್ತೆಬದಿಯಲ್ಲಿ ಬಿಸಾಡದೆ, ವಾರಕ್ಕೊಮ್ಮೆ ಪುರಸಭೆಯಿಂದ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಹಾಕಬೇಕೆಂದು ಪುರಸಭಾ ಮುಖ್ಯ ಅಧಿಕಾರಿ ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು.

Related posts

Leave a Reply

Your email address will not be published. Required fields are marked *