Header Ads
Header Ads
Breaking News

ತ್ರಾಸಿ-ಮರವಂತೆ ಭಾಗದಲ್ಲಿ ಕಡಲ್ಕೊರೆತ. ಬಂಡೆಕಲ್ಲುಗಳ ಜೋಡಣೆ ನಿರೀಕ್ಷಿತ ಯಶಸ್ಸು ನೀಡುತ್ತಿಲ್ಲ.

ಕುಂದಾಪುರ: ಸಾಕಷ್ಟು ವರ್ಷಗಳಿಂದಲೂ ಮಳೆಗಾಲದಲ್ಲಿ ತ್ರಾಸಿ-ಮರವಂತೆ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಇದರ ತಡೆಗೆ ಬಂಡೆಕಲ್ಲುಗಳ ಜೋಡಣೆ ನಿರೀಕ್ಷಿತ ಯಶಸ್ಸು ನೀಡುತ್ತಿಲ್ಲ ಎಂಬ ಉದ್ದೇಶದಿಂದ ಕಡಲ್ಕೊರೆತ ತಡೆಗಟ್ಟಲು ಸುಸ್ಥಿರ ಕಡಲತೀರ ನಿರ್ವಹಣಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಯೋಜನೆಯ ಗುತ್ತಿಗೆದಾರ ಕೊಮಾಕೊ ಕಂಪನಿಯ ಉಪ ಪ್ರಬಂಧಕ ಕಿಶೋರ್‌ಕುಮಾರ್ ಹೇಳಿದರು.ಅವರು ಮಾಧ್ಯಮ ಪ್ರತಿನಿಧಿಗಳನ್ನು ಯೋಜನಾ ಪ್ರದೇಶಕ್ಕೆ ಬರಮಾಡಿಕೊಂಡು ಕಾಮಗಾರಿಯ ಕುರಿತು ಸ್ಪಷ್ಟ ಮಾಹಿತಿ ನೀಡಿದರು. ರಾಷ್ಟ್ರೀಯ ಹೆದ್ದಾರಿ66ರ ಸಮೀಪ ಮರವಂತೆ-ತ್ರಾಸಿ ನಡುವಿನ ಕಡಲತೀರ ಸಮುದ್ರ ಕೊರೆತ ತೀವ್ರವಾಗಿರುವುದರಿಂದ ಎಡಿಬಿ ನೆರವಿನಿಂದ ರೂ. 83 ಕೋಟಿ ರೂ. ವೆಚ್ಚದಲ್ಲಿ ಕಡಲ್ಕೊರೆತ ತಡೆಗೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ತ್ರಾಸಿ-ಮರವಂತೆಯಲ್ಲಿ ನಡೆಸುತ್ತಿರುವ ಕಾಮಗಾರಿ ಸಾಂಪ್ರದಾಯಿಕ ಕಡಲ್ಕೊರೆತ ತಡೆಗೋಡೆಯಲ್ಲ. ಸಮುದ್ರ ದಂಡೆಯುದ್ದಕ್ಕೆ ಕಲ್ಲುಗಳನ್ನು ಜೋಡಿಸುವ ಬದಲಿಗೆ ದಂಡೆಗೆ ಲಂಬವಾಗಿ ಗ್ರಾಯನ್ ಎಂದು ಕರೆಯಲಾಗುವ ನಿರ್ಮಾಣಗಳನ್ನು ರಚಿಸಲಾಗುವುದು. ಇವು ತೀರ ಪ್ರದೇಶದ ಸವಕಳಿಯನ್ನು ತಡೆಯುತ್ತದೆ. ಎರಡು ಗ್ರಾಐನ್ ಗಳ ಮಧ್ಯೆ ಶೇಖರಣೆಯಾಗುವ ಮರಳಿನಿಂದ ಸಮುದ್ರ ಹಿಂದಕ್ಕೆ ಸರಿದು ದಂಡೆ ವಿಸ್ತಾರಗೊಳ್ಳುತ್ತದೆ. ಇದರಿಂದ ಬೀಚ್‌ನ ಸೌಂದರ್ಯ ಹೆಚ್ಚುತ್ತದೆ ಎಂದರು.ಈಗಾಗಲೇ ಶೇ೪೦ ರಷ್ಟು ಕಾಮಗಾರಿ ಮುಗಿದಿದೆ. ಮುಂದಿನ ವರ್ಷ ಮಾರ್ಚ್‌ಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

Related posts

Leave a Reply