Header Ads
Header Ads
Breaking News

ತ್ರಿವಿಧ ದಾಸೋಹಿ ಡಾ. ಶಿವಕುಮಾರ ಶ್ರೀಗಳು ಲಿಂಗೈಕ್ಯ ಹಿನ್ನೆಲೆ: ಸ್ವಾಮೀಜಿ ಲಿಂಗಶರೀರದ ಅಂತಿಮ ದರ್ಶನ ಪಡೆದ ಭಕ್ತ ಸಾಗರ

ಸಾಮಾಜಿಕ ನ್ಯಾಯದ ಹರಿಹಾರ, ಕಾಯಕಯೋಗಿ, ತ್ರಿವಿಧ ದಾಸೋಹಿ, ಶೈಕ್ಷಣಿಕ ಜ್ಯೋತಿ, ನಡೆದಾಡುವ ದೇವರು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಲಿಂಗಶರೀರದ ಅಂತಿಮ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬರತೊಡಗಿದೆ. ಸಿದ್ದಗಂಗಾ ಮಠದತ್ತ ಅಪಾರ ಜನಸ್ತೋಮ ಹರಿದು ಬರುತ್ತಿದ್ದ ಹಿನ್ನೆಲೆಯಲ್ಲಿ ಸಂಜೆ 6ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.ಬೆಂಗಳೂರಿನಿಂದ ವಿಶೇಷ ರೈಲುಗಳಲ್ಲಿ, ತುಮಕೂರಿನ ಹಾಗೂ ಸುತ್ತಮುತ್ತ ಹಳ್ಳಿಗಳಿಂದ ಜನರು ಬಸ್‌ಗಳಲ್ಲಿ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ತುಮಕೂರಿನ ಹೊರವಲಯದಲ್ಲಿಯೇ ವಾಹನಗಳಿಗೆ ತಡೆಯೊಡ್ಡಲಾಗುತ್ತಿದ್ದು, ಅಲ್ಲಿಂದ ಜನ ಮಠದತ್ತ ಆಗಮಿಸುತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು ಐದು ಕಿಲೋ ಮೀಟರ್ ಗಿಂತಲೂ ಹೆಚ್ಚು ಉದ್ದದ ಭಕ್ತರ ಸಾಲು ಕಂಡು ಬಂದಿದೆ. ತುಮಕೂರಿನ ಹೈವೇಯ ಇಕ್ಕೆಲಗಳಲ್ಲಿಯೂ ೬೦ಕ್ಕೂ ಹೆಚ್ಚು ಕಡೆ ಅನ್ನ ದಾಸೋಹ ನಡೆಸಲಾಗುತ್ತಿದೆ. ಬೆಳಗ್ಗೆ ಕೂಡಾ ಯಾವುದೇ ಭಕ್ತರಿಗೂ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ.

Related posts

Leave a Reply