Header Ads
Header Ads
Breaking News

ದಕ್ಷಿಣ ಏಷ್ಯನ್ ಫೆಡರೇಶನ್ ಜೂನಿಯರ್ ಅಥ್ಲೆಟಿಕ್ಸ್ ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸ್ಪರ್ಧೆ ಆಳ್ವಾಸ್‌ಗೆ ಒಟ್ಟು 6 ಪದಕ ಪ್ರಜ್ವಲ್ ವೇಗದ ಓಟಗಾರ, ಆಶಿಷ್ ಕೂಟ ದಾಖಲೆ

ಮೂಡುಬಿದಿರೆ : ಶ್ರೀಲಂಕಾದ ಕೊಲಂಬೋದಲ್ಲಿ ರವಿವಾರ ಮುಕ್ತಾಯಗೊಂಡ ದಕ್ಷಿಣ ಏಪ್ಯನ್ ಫೆಡರೇಶನ್ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು ಒಂದು ಕೂಟ ದಾಖಲೆಯೊಂದಿಗೆ ಮೂರು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಹೀಗೆ ಒಟ್ಟು ಆರು ಪದಕಗಳೊಂದಿಗೆ ಸಾಧನೆಯನ್ನು ಮಾಡಿದ್ದಾರೆ.

ಬಾಲಕರ ಶಾಟ್‌ಪುಟ್ ಎಸೆತ ಸ್ಪರ್ಧೆಯಲ್ಲಿ ಆಶಿಷ್ 18.53 ಮೀ.ಗೆ ದೂರ ಎಸೆದು ಹೊಸ ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿರುತ್ತಾರೆ. 100ಮೀ.ಓಟದಲ್ಲಿ ಪ್ರಜ್ವಲ್ ಮಂದಣ್ಣ 10.83 ಸೆಕುಂಡುಗಳೊಂದಿಗೆ ಚಿನ್ನದ ಪದಕವನ್ನು ಪಡೆದು ಕೂಟದ ವೇಗದ ಓಟಗಾರ ಗೌರವಕ್ಕೆ ಪಾತ್ರರಾಗಿದ್ದಾರಲ್ಲದೆ, 400×100 ರಿಲೇಯಲ್ಲೂ ಚಿನ್ನದ ಪದಕವನ್ನು ಪಡೆದುಕೊಂಡಿರುತ್ತಾರೆ.ಶಾಟ್‌ಪುಟ್ ಎಸೆತದಲ್ಲಿ ಬಾಲಕಿಯರ ವಿಭಾಗದಲ್ಲಿ ಅನಾಮಿಕ 14.86 ಮೀ ದೂರ ಎಸೆದು ಬೆಳ್ಳಿ ಪದಕ, 400 ಮೀ.ಓಟದಲ್ಲಿ ಶುಭ.ವಿ 55.1 ಸೆಂಕುಡುಗಳಲ್ಲಿ ಕ್ರಮಿಸಿ ಬೆಳ್ಳಿಯ ಪದಕ ಹಾಗೂ ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಅಭಿನಯ ಶೆಟ್ಟಿ 1.60 ಮೀ.ಎತ್ತರಜಿಗಿದುಕಂಚಿನಪದಕವನ್ನುಗಳಿಸಿಕೊಂಡಿದ್ದಾರೆ.ದಕ್ಷಿಣ ಏಷ್ಯಾ ಜೂನಿಯರ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳು ಆರು ಪದಕಗಳ ಸಾಧನೆಯನ್ನು ತೋರಿದ್ದು, ಮುಂದಿನ ಏಷ್ಯನ್ ಜ್ಯೂನಿಯರ್ ಕ್ರೀಡಾಕೂಟದಲ್ಲಿ ಹೆಚ್ಚಿನ ಕ್ರೀಡಾಪಟುಗಳು ಪದಕ ಸಾಧನೆ ಮಾಡುವ ನಿರೀಕ್ಷೆ ಇರುವುದಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

Related posts

Leave a Reply