Breaking News

ದಕ್ಷಿಣ ಕನ್ನಡ ಜಿಲ್ಲೆಗೆ ತುಳುನಾಡು ಎಂದು ನಾಮಕರಣ ಮಾಡಿ, ಪ್ರಸ್ತಾವನೆಯನ್ನು ಸಭೆಯ ಮುಂದಿಟ್ಟ ರೂಪ ಡಿ. ಬಂಗೇರ

ನಮ್ಮ ಜಿಲ್ಲೆಗೆ ಈಗಿನ ದಕ್ಷಿಣ ಕನ್ನಡ ಹೆಸರಿನ ಬದಲಾಗಿ ತುಳುನಾಡು ಎಂದು ನಾಮಕರಣ ಮಾಡುವಂತೆ ನಾವೆಲ್ಲರು ರಾಜಕೀಯ ರಹಿತವಾಗಿ ಒಮ್ಮತದಿಂದ ನಿರ್ಣಯವನ್ನು ಕೈಗೊಂಡು ರಾಜ್ಯ ಸರಕಾರವನ್ನು ಒತ್ತಾಯಿಸಬೇಕು ಆದ್ದರಿಂದ ಈ ಪ್ರಸ್ತಾವನೆಯನ್ನು ಪಾಲಿಕೆ ಮುಂದಿನ ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ ಅಳವಡಿಸಬೇಕಾಗಿ ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂಗೇರ ಹೇಳಿದರು.
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತಾನಾಡಿದ ಪ್ರತಿಪಕ್ಷದ ನಾಯಕಿ ರೂಪ ಡಿ. ಬಂಗೇರ ತುಳುನಾಡು ತನ್ನ ಜನಪದ ವೈವಿದ್ಯ ಮತ್ತು ಆಚರಣೆಗಳಿಂದ ವಿಶ್ವದ ಗಮನ ಸೆಳೆದಿದೆ. ಪಾಡ್ದನ, ಯಕ್ಷಗಾನ, ಕಂಬಳ ಆಟಿ ಕಳಂಜ ಭೂತ ನರ್ತನ, ನಾಗ ಬನ ಹಾಗೂ ಸಂಬಂಧಿತ ಧಾರ್ಮಿಕ ಕಾರ್ಯಗಳು ಪುರಾಣ ಪ್ರಸಿದ್ದ ದೇವಾಲಯಗಳಿದ್ದು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಕೈಕನ್ನಡಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮೇಯರ್ ಕವಿತಾ ಸನಿಲ್ ಅವರಿಗೆ ಮನವಿಯನ್ನು ಸಲ್ಲಿಸಿದರು.

Related posts

Leave a Reply