Header Ads
Header Ads
Header Ads
Breaking News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬದ ಸಂಭ್ರಮ ಮುಸ್ಲಿಂ ಬಾಂಧವರಿಂದ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಂಗಳೂರು, ಉಳ್ಳಾಲ, ವಿಟ್ಲ, ಸುಳ್ಯದಲ್ಲಿ ಬಕ್ರೀದ್ ಆಚರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪ್ರವಚನ ನಡೆಯಿತು. ಉಳ್ಳಾಲದ ಸಯ್ಯದ್ ಮದನಿ ದರ್ಗಾ ಸೇರಿದಂತೆ ಉಳ್ಳಾಲದ ವಿವಿಧೆಡೆಯ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ನಮಾಜ್ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿಟ್ಲ ಸುತ್ತಮುತ್ತಲಿನ ಮಸೀದಿಗಳಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬು ಅಬ್ದುಲ್ ಸಲಾಂ ಲತೀಫಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕೆಲಿಂಜ ಜುಮಾ ಮಸೀದಿಯಲ್ಲಿ ಖತೀಬು ಎಸ್.ಎಂ ಅಬ್ಬಾಸ್ ದಾರಿಮಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಂದೇಶ ನೀಡಿದರು ವಿಟ್ಲದ ಕಂಬಳಬೆಟ್ಟು, ಕನ್ಯಾನ, ಅಳಕೆಮಜಲು, ಕರೋಪಾಡಿ, ಸಾಲೆತ್ತೂರು, ಉಕ್ಕುಡ, ಮೊದಲಾದ ಕಡೆಗಳಲ್ಲಿ ಹಬ್ಬ ಆಚರಿಸಲಾಯಿತು. ಮುಸ್ಲಿಂ ಭಾಂದವರು ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿದರು.

ಸುಳ್ಯ ತಾಲೂಕಿನಾದ್ಯಂತ ಸಂಭ್ರಮದ ಬಕ್ರಿದ್ ಆಚರಣೆ ನಡೆಯಿತು. ಅರಂತೋಡು ಹುಮ್ಮಸ್ಸು ಮಸೀದಿಯಲ್ಲಿ ಇಸಾಜ್ ದಾರಿಮಿ ನೇತ್ರತ್ವದಲ್ಲಿ ನಮಾಜ್ ನಡೆಯಿತು.ನಂತರ ಅವರು ಉಪನ್ಯಾಸ ನೀಡಿದರು. ಬೆಳ್ಳಾರೆ ಝಕರಿಯ್ಯಾ ಜುಮಾ ಮಸೀದಿಯಲ್ಲಿ ಮುದರ್ರಿಸ್ ಬಹು.ತಾಜುದ್ದೀನ್ ರಹ್ಮಾನಿ ರವರ ನೇತ್ರತ್ವದಲ್ಲಿ ಈದ್ ನಮಾಝ್ ಜರುಗಿತು.

Related posts

Leave a Reply