Header Ads
Breaking News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ವಾರ ಕಾಲ ಲಾಕ್‌ಡೌನ್ : 11 ಗಂಟೆ ನಂತರ ಜನರ ಓಡಾಟಕ್ಕೆ ಪೊಲೀಸರ ಬ್ರೇಕ್!

ಮಂಗಳೂರಿನಲ್ಲಿ ಮತ್ತೆ ಲಾಕ್ ಡೌನ್ ಜಾರಿಗೆ ಬಂದಿದ್ದು ಇಂದು ಬೆಳಗ್ಗೆ ೮ ಗಂಟೆಯಿಂದ 11ರವರೆಗೆ ಲಾಕ್‌ಡೌನ್ ಸಡಿಲಿಕೆ ನೀಡಲಾಗಿತ್ತು. ಅಗತ್ಯ ಸಾಮಗ್ರಿ ಖರೀದಿಗಾಗಿ ಜನರ ಓಡಾಟಕ್ಕೆ ಅವಕಾಶ ನೀಡಿದ್ದರೆ, 11ಗಂಟೆ ನಂತರವೂ ಜನ ಓಡಾಡುವುದನ್ನು ಪೊಲೀಸರು ತಡೆದಿದ್ದಾರೆ. ಮಂಗಳೂರಿನ ಜ್ಯೋತಿ ಸರ್ಕಲ್, ನಂತೂರು ವೃತ್ತ , ಕದ್ರಿ ಹೀಗೆ ಅಲ್ಲಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದು ವಾಹನಗಳಲ್ಲಿ ಬರುವ ಜನರನ್ನು ತಡೆದು ಹಿಂದೆ ಕಳಿಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ಲಾಕ್ ಡೌನ್ ಇದ್ದಾಗ ಪೊಲೀಸರು ಇದೇ ರೀತಿ ಕಾರ್ಯಾಚರಣೆ ನಡೆಸುತ್ತಿದ್ದರು. ಈಗ ಮತ್ತೆ ಮಂಗಳೂರಿನಲ್ಲಿ ಕೊರೊನಾ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನು ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ದಿನಸಿ, ಹಣ್ಣು, ತರಕಾರಿ ಮಾಂಸದ ಅಂಗಡಿಗಳು ಓಪನ್ ಇತ್ತು. ಆದ್ರೆ ಜಿಲ್ಲಾಡಳಿತ ಈ ಅವಕಾಶ ನೀಡಿದ್ದರು ಸಹ ಮಾರ್ಕೆಟ್‌ಗಳತ್ತ ಜನ ಇಂದು ಸುಳಿಯಲಿಲ್ಲ. ಮಂಗಳೂರಿನ ಎಲ್ಲಾ ಮಾರ್ಕೆಟ್‌ಗಳು ಖಾಲಿ ಖಾಲಿಯಾಗಿದ್ದವು. ಪುತ್ತೂರು ಬಂಟ್ವಾಳ, ಸುಳ್ಯ, ಬೆಳ್ತಂಗಡಿಯಲ್ಲೂ ಜನರ ಸಂಖ್ಯೆ ಅತ್ಯಂತ ವಿರಳವಾಗಿರುವುದು ಕಂಡು ಬಂತು. ಗ್ರಾಹಕರಿಗಾಗಿ ವ್ಯಾಪಾರಸ್ಥರು ಕಾಯುತ್ತಿರುವ ದೃಶ್ಯಗಳು ಕಂಡುಬಂತು.ವೈದ್ಯಕೀಯ ಅಗತ್ಯ ಬಿಟ್ಟರೆ ಬೇರೆ ಯಾರಿಗೂ ಹೊರಗೆ ಬರಲು ಅವಕಾಶ ಇಲ್ಲ ಎನ್ನುವ ಸೂಚನೆಯನ್ನು ಜನ ಜಿಲ್ಲಾಡಳಿತ ನೀಡಿದ್ದು ಜನರನ್ನು ಒಂದು ವಾರ ಕಾಲ ಮನೆಯಲ್ಲಿ ಹಿಡಿದಿಡಲು ಕಸರತ್ತು ನಡೆಸಿದೆ. ಆದರೆ, ಲಾಕ್ ಡೌನ್ ಬಳಿಕ ಚೂರು ಸಾವರಿಸುತ್ತಿದ್ದಂತೆ ಮತ್ತೆ ಜಾರಿಯಾದ ಲಾಕ್ ಡೌನ್ ನಿಯಮ ಈಗ ಜನರಲ್ಲಿ ಇರಿಸು ಮುರಿಸು ತಂದಿದೆ

Related posts

Leave a Reply

Your email address will not be published. Required fields are marked *