
ದಕ್ಷಿಣ ಕನ್ನಡ ಜಿಲ್ಲೆ ಪವಿತ್ರ ಪುಣ್ಯ ಭೂಮಿ. ಈ ದೇಶಕ್ಕೆ ಸಂಸ್ಕøತಿ, ವಿದ್ಯಾದಾನ, ಆರ್ಥಿಕವಾದ ಶಕ್ತಿಕೊಟ್ಟಂತಹ ಪುಣ್ಯಭೂಮಿ. ಈ ಭೂಮಿ ದುರುಪಯೋಗ ಅಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.ಅವರು ಬಂಟ್ವಾಳದಲ್ಲಿ ನಡೆಯುತ್ತಿರುವ ಮೈಸೂರು ವಿಭಾಗ ನಾನಾ ಜಿಲ್ಲೆಗಳ ಸ್ಥಳೀಯ ಮುಖಂಡರ ಜೊತೆ ಸಮಾಲೋಚನಾ ಸಭೆ ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು. ಕಾರ್ಯಕರ್ತರ ಧ್ವನಿ ಅಧ್ಯಕ್ಷರ ಧ್ವನಿಯಾಗಬೇಕು, ಆದರೆ ಅಧ್ಯಕ್ಷರ ಧ್ವನಿ ಕಾರ್ಯಕರ್ತರ ಧ್ವನಿಯಾಗಬಾರದು. ಅದಕ್ಕೆ ಇವತ್ತು ಮೈಸೂರು ವಿಭಾಗ ಮಟ್ಟದ ಎಲ್ಲಾ ಅಧ್ಯಕ್ಷರುಗಳನ್ನು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳನ್ನು ಮತ್ತು ಜಿಲ್ಲಾ ಅಧ್ಯಕ್ಷರುಗಳನ್ನು ಸೇರಿಸಿ ಅವರು, ಹೇಳಿದ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯ ಅಭಿಪ್ರಾಯ ಮತ್ತು ಸಂಘಟನೆಯ ವಿಚಾರಗಳನ್ನು ಹೇಳಿಕೊಳ್ಳಲು ಪ್ರತಿಯೊಬ್ಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಅವಕಾಶ ಕೊಡಲಾಗಿದೆ ಎಂದರು.