Header Ads
Header Ads
Breaking News

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಯೋಗ ದಿನಾಚರಣೆ

ದಕ್ಷಿಣಕನ್ನಡ ಸಹಕಾರಿ ಹಾಲು ಉತ್ಪಾದಕg ಒಕ್ಕೂಟ ನಿಯಮಿತ ಮತ್ತು ಶ್ರೀ ಸಹರಾ ಪ್ರಕೃತಿ ಚಿಕಿತ್ಸಾ ಕೇಂದ್ರ, ಮಂಗಳೂರು ಇವರ ಸಹಯೋಗದೊಂದಿಗೆ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಒಕ್ಕೂಟದ ಆವರಣದಲ್ಲಿ ಆಚರಿಸಲಾಯಿತು.ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಒಕ್ಕೂಟದ ಪ್ರಗತಿಗೆ ಸಿಬ್ಬಂದಿಗಳು ಆಸ್ತಿಯಾಗಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ವಿಶ್ವದಲ್ಲಿ ಮಾನ್ಯತೆ ಪಡೆಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವ ಮೂಲಕ ಒಕ್ಕೂಟದ ಸಿಬ್ಬಂದಿಗಳು ಶರೀರ, ಇಂದ್ರಿಯ ಮತ್ತು ಮನಸ್ಸಿನ ನಡುವೆ ಸಮನ್ವಯ ಸಾಧಿಸಿ, ಸಹಬಾಳ್ವೆಯಿಂದ ಆರೋಗ್ಯ ಪೂರ್ಣಜೀವನ ಸಾಗಿಸಲು ಸಾಧ್ಯ ಎಂದು ತಿಳಿಸಿದರು.

ಮಂಗಳೂರಿನ ಶ್ರೀ ಸಹರಾ ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ. ವಿನುತಾ ಡಿಸೋಜ, ಶ್ರೀಮತಿ ಪೂರ್ಣಿಮಾ ರಾವ್, ಡಾ: ಜೇಯಶ್‌ರವರು ಅತಿಥಿಗಳಾಗಿ ಭಾಗವಹಿಸಿ, ಯೋಗಾಭ್ಯಾಸದ ಮೂಲಕ ಆರೋಗ್ಯ ಭರಿತ ಜೀವನ ನಡೆಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಡಾ: ವಿನುತಾಡಿಸೋಜರವರ ಮಾರ್ಗದರ್ಶನದಂತೆ ಒಂದು ಘಂಟೆ ಕಾಲ ಯೋಗಾಭ್ಯಾಸ ನಡೆಯಿತು.ಕಾರ್ಯಕ್ರಮದಲ್ಲಿ ಒಕ್ಕೂಟದ ವ್ಯವಸ್ಥಾಪಕರುಗಳಾದ, ಜಿ.ಎ. ರಾಯ್ಕರ್, ಶಿವಶಂಕರಸ್ವಾಮಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವ್ಯವಸ್ಥಾಪಕರಾದ ಜಯದೇವಪ್ಪ ಕೆ., ಶಕುಂತಲಾ ಪ್ರಕಾಶ್ ಶೆಟ್ಟಿ ಮತ್ತಿತರರು ಭಗವಹಿಸದ್ದರು.

 

Related posts

Leave a Reply