Header Ads
Header Ads
Breaking News

ದಕ್ಷಿಣ ವಲಯ ಅಂತರ್ ವಿ.ವಿ ಮಹಿಳಾ ಕಬಡ್ಡಿ ಕರ್ನಾಟಕದ 3 ಜಿಲ್ಲೆಗಳ ತಂಡಗಳು ಅರ್ಹತಾ ಹಂತಕ್ಕೆ ಆಯ್ಕೆ

 

ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಆಳ್ವಾಸ್ ಕಾಲೇಜು ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿ.ವಿ ಮಹಿಳಾ ಕಬಡ್ಡಿ ಟೂರ್ನಿಯಲ್ಲಿ ಎರಡನೇ ದಿನವಾದ ಶುಕ್ರವಾರ ನಡೆದ ಕುತೂಹಲಕಾರಿ ಪಂದ್ಯದಲ್ಲಿ ಕರ್ನಾಟಕದ ವಿಟಿಯು ಬೆಳಗಾಂ, ಕುವೆಂಪು ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ ತಂಡವು ಶುಕ್ರವಾರ ಗೆದ್ದು ಮುಂದಿನ ಹಂತಕ್ಕೆ ಅರ್ಹತೆಯನ್ನು ಪಡೆದುಕೊಂಡಿದೆ. .

ಕೇರಳ ವಿ.ವಿ ತಂಡವು ಮದುರೈ ಕಾಮರಾಜ ವಿ.ವಿ ತಂಡವನ್ನು 35-37 ಅಂಕಗಳೊಂದಿಗೆ ಸೋಲಿಸಿ ಕ್ವಾಟರ್ ಫೈನಲ್‌ಗೆ ತೇರ್ಗಡೆಗೊಂಡಿದೆ. ಈ ಎರಡು ತಂಡಗಳ ನಡೆದ ರೋಚಕ ಸ್ಪರ್ಧೆಯಲ್ಲಿ ನಿಗಧಿತ ಅವಧಿಯಲ್ಲಿ ಪಂದ್ಯ ಮುಗಿದಾಗ ಎರಡು ತಂಡಗಳು ತಲಾ 31 ಅಂಕಗಳನ್ನು ಪಡೆದು ಪಂದ್ಯ ಟೈ ಕೊಂಡಿತು. ಟೈ ಬ್ರೇಕಿಂಗ್ ಅವಧಿಯಲ್ಲಿ ಕೇರಳ ತಂಡ ಮದುರೈ ತಂಡವನ್ನು 6-4 ಅಂಕಗಳಲ್ಲಿ ಸೋಲಿಸಿ ಕ್ವಾಟರ್ ಫೈನಲ್‌ಗೆ ತೇರ್ಗಡೆಗೊಂಡಿತು. ಮದುರೈ ತಂಡದ ಹಿರಿಯ ಆಟಗಾರ್ತಿ ಕಲೈರಸಿ ಗಾಯಗೊಂಡರೂ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದರು. ಈಕೆ ಅದ್ಭುತ ಆಟಕ್ಕೆ ಆಳ್ವಾಸ್ ಸಂಸ್ಥೆ ವತಿಯಿಂದ ರೂ. 3000 ನಗದು ಪುರಸ್ಕಾರ ನೀಡಲಾಯಿತು. ಇಂದು ಅತಿಥೇಯ ಮಂಗಳೂರು ವಿ.ವಿ ಹಾಗೂ ವಿಟಿಯು ಬೆಳಗಾಂ ಸೆಣಸಲಿದೆ.
ವರದಿ: ಪ್ರೇಮಶ್ರೀ ಮೂಡಬಿದಿರೆ

Related posts