Header Ads
Header Ads
Breaking News

ದಕ್ಷಿಣ ವಲಯ ಅಕ್ವೆಟಿಕ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್:ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ.

ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ವಿಜಯವಾಡದಲ್ಲಿ ನಡೆದ ದಕ್ಷಿಣ ವಲಯ ಅಕ್ವೆಟಿಕ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಹಾಗೂ ಪದಕಗಳನ್ನು ಪಡೆದು ವಿಜೇತರಾಗಿದ್ದಾರೆ.

ಮಂಗಳೂರಿನಲ್ಲಿರುವ ಮಂಗಳಾ ಸ್ವಿಮಿಂಗ್ ಕ್ಲಬ್‌ನ ವಿದ್ಯಾರ್ಥಿಗಳು ಈಗಾಗಲೇ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಮಿಂಚಿದ್ದಾರೆ. ಇದೀಗ ಮತ್ತೊಮ್ಮೆ ಇಲ್ಲಿನ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಡಿಸೆಂಬರ್ 27,28,29ರಂದು ವಿಜಯವಾಡದಲ್ಲಿ ನಡೆದ ದಕ್ಷಿಣ ವಲಯ ಅಕ್ವೆಟಿಕ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಮೂವರು ವಿದ್ಯಾರ್ಥಿಗಳಾದ ರಚನಾ ರಾವ್ ಎಸ್ ಆರ್, ಆರ್‍ನಾ ಎಂ. ಪಿ., ನಮೃತಾ ಶೆಟ್ಟಿ ದಕ್ಷಿಣ ವಲಯ ಅಕ್ವೆಟಿಕ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್ ಆಯ್ಕೆಯಾದ ವಿದ್ಯಾರ್ಥಿಗಳು.

50 ಮೀಟರ್ ಬ್ರೆಸ್ಟ್ ಸ್ಟ್ರೋಕ್,100ಮೀಟರ್ ಬ್ರೆಸ್ಟ್ ಸ್ಟ್ರೋಕ್, 200 ಮೀಟರ್ ಬ್ರೆಸ್ಟ್ ಸ್ಟ್ರೋಕ್, 50 ಮೀಟರ್ ಫ್ರೀ ಸ್ಟೈಲ್ ಮತ್ತು 4×100 ಮೀಟರ್ ಮೆಡ್ಲೆ ರಿಲೇಯಲ್ಲಿ ರಚನಾ ರಾವ್ ಎಸ್. ಆರ್. ಪ್ರಥಮ ಸ್ಥಾನವನ್ನು ಗಳಿಸಿ ಒಟ್ಟು 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡು ವಿಜೇತರಾಗಿದ್ದಾರೆ.

ಆರ್‍ನಾ ಎಂ. ಪಿ. 4×100 ಮೀಟರ್ ಫ್ರೀ ಸ್ಟೈಲ್ ಮತ್ತು 4×50 ಮೆಡ್ಲೆ ರೆಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಒಟ್ಟು 2 ಚಿನ್ನದ ಪದಕಗಳನ್ನು ಪಡೆದಿರುತ್ತಾರೆ. ಜೊತೆಗೆ 100 ಮೀಟರ್ ಫ್ರೀ ಸ್ಟೈಲ್‌ನಲ್ಲಿ 4ನೇ ಸ್ಥಾನವನ್ನು ಗಳಿಸಿದರು.

ಇನ್ನು ನಮೃತಾ ಶೆಟ್ಟಿ 1500 ಮೀಟರ್ ಫ್ರೀ ಸ್ಟೈಲ್‌ನಲ್ಲಿ 5ನೇ ಸ್ಥಾನವನ್ನು ಗಳಿಸಿರುತ್ತಾರೆ.

ವಿಜಯವಾಡದಲ್ಲಿ ನಡೆದ ದಕ್ಷಿಣ ವಲಯ ಅಕ್ವೆಟಿಕ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈಜು ಸ್ಪರ್ಧೆಗೆ ಆಯ್ಕೆಯಾದ ಹಾಗೂ ಪ್ರಶಸ್ತಿ ಪಡೆದ ಈ ಮೂವರು ವಿದ್ಯಾರ್ಥಿಗಳು ಮಂಗಳೂರಿನ ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಮುಖ್ಯ ತರಭೇತುದಾರರಾದ ಲೋಕ್ ರಾಜ್ ವಿಟ್ಲ ಮತ್ತು ಶಿವಾನಂದ ಗಟ್ಟಿಯವರಿಂದ ಮಂಗಳಾ ಸ್ವಿಮ್ಮಿಂಗ್ ಪೂಲ್ ಹಾಗೂ ಸಂತ ಅಲೋಷಿಯಸ್ ಈಜುಕೊಳದಲ್ಲಿ ತರಭೇತಿಯನ್ನು ಪಡೆಯುತ್ತಿದ್ದಾರೆ.

Related posts

Leave a Reply