Header Ads
Header Ads
Header Ads
Breaking News

ದಕ್ಷಿಣ ವಲಯ ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್ ಇಂದಿನಿಂದ ಮೂಡಬಿದಿರೆಯಲ್ಲಿ ಪ್ರಾರಂಭ

ಮೂಡುಬಿದಿರೆ : ಮಂಗಳೂರು ವಿ.ವಿ. ಹಾಗೂ ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 16 ರಿಂದ 19 ರವರೆಗೆ ದಕ್ಷಿಣ ವಲಯ ಅಂತರ್ ವಿ.ವಿ. ಮಹಿಳಾ ಕಬಡ್ಡಿ ಚಾಂಪಿಯನ್‌ಶಿಪ್ ನಡೆಯಲಿದೆ. ವಿದ್ಯಾಗಿರಿ ಕ್ಯಾಂಪಸ್‌ನ ನುಡಿಸಿರಿ ಸಭಾಂಗಣದ ಒಳಾಂಗಣ ಆವರಣದಲ್ಲಿ 4 ಮ್ಯಾಟ್ ಅಂಕಣಗಳಲ್ಲಿ ನಡೆಸಲಾಗುತ್ತದೆ ಎಂದು ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್ ಕುಮಾರ್ ಹೇಳಿದರು. ದಕ್ಷಿಣ ಭಾರತ ವ್ಯಾಪ್ತಿಯ ಕರ್ನಾಟಕ, ತಮಿಳುನಾಡು, ಕೇರಳ, ಆಂದ್ರಪ್ರದೇಶ, ತೆಲಂಗಾಣ ಹಾಗೂ ಪಾಂಡಿಚೇರಿ ರಾಜ್ಯಗಳಿಂದ ಸುಮಾರು 58 ವಿಶ್ವವಿದ್ಯಾನಿಲಯ ತಂಡಗಳು ಈ ಚಾಂಪಿಯನ್‌ಶಿಪ್ ಭಾಗವಹಿಸಲಿವೆ. ನವೆಂಬರ್ 16 ರಂದು ಬೆಳಿಗ್ಗೆ ಪಂದ್ಯಾಟಗಳು ಆರಂಭವಾಗಲಿದ್ದು ಪಂದ್ಯಾಟ ಹಗಲು ಹಾಗೂ ಹೊನಲು ಬೆಳಕಿನಡಿಯಲ್ಲಿ ನಡೆಯಲಿದೆ. ನಾಕೌಟ್ ಮಾದರಿಯಲ್ಲಿ ನಡೆಯುವ ಪಂದ್ಯಗಳು ಸೆಮಿಫೈನಲ್ ನಂತರ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ಕಳೆದ ಬಾರಿಯ ದಕ್ಷಿಣ ವಲಯ ಕೂಟದಲ್ಲಿ ಮಂಗಳೂರು ವಿ.ವಿ. ರನ್ನರ್‍ಸ್ ಅಪ್ ಪ್ರಶಸ್ತಿ ಪಡೆದಿದ್ದು ಅಖಿಲ ಭಾರತ ಮಟ್ಟಕ್ಕೆ ಆಯ್ಕೆಯಾಗಿತ್ತು. ಈ ಬಾರಿ ಅತಿಥೇಯ ತಂಡ ಆಳ್ವಾಸ್ ಕ್ಯಾಂಪಸ್‌ನಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸುತ್ತಿದ್ದು ಪ್ರಶಸ್ತಿಗಾಗಿ ಹೋರಾಡಲಿದೆ. ಕಳೆದ ಬಾರಿ ಮಧುರೈನ ಮದರ್ ಥೆರೆಸಾ ವಿಶ್ವವಿದ್ಯಾನಿಲಯ ಪ್ರಶಸ್ತಿಯನ್ನು ಪಡೆದಿತ್ತು.

ವರದಿ: ಪ್ರೇಮಶ್ರೀ ಮೂಡಬಿದಿರೆ

Related posts

Leave a Reply